

ಕೋಟ: ಯಕ್ಷಗಾನ ಕಲೆಯಲ್ಲಿರುವ ಸಾಹಿತ್ಯದ ಕಂಪನ್ನು ಬೇರಾವುದರಲ್ಲಿ ಕಾಣಲು ಸಾಧ್ಯವಿಲ್ಲ. ಅದಕ್ಕಾಗಿಯೇ ಜಗತ್ತಿನ ಶ್ರೀಮಂತ ಕಲೆಯಾಗಿ ಯಕ್ಷಗಾನ ಹೊರಹೊಮ್ಮಿದೆ ಎಂದು ಯಕ್ಷ ಚಿಂತಕ ಎಚ್.ಸುಜಯೀಂದ್ರ ಹಂದೆ ಅಭಿಪ್ರಾಯಪಟ್ಟರು.
ಶುಕ್ರವಾರ ಕಾರ್ಕಡದ ಭೂಮಿಕಾ ಆವರಣದ ಸಮೀಪ ಎನ್.ಪಿ.ಎನ್. ಕಾಂಪ್ಲೆಕ್ಸ್ ಪರಿಸರದಲ್ಲಿ ಸಮಾನ ಮನಸ್ಕರು ಏರ್ಪಡಿಸಿದ ಯುಗಾದಿ ವಸಂತ ಪುರಸ್ಕಾರ ಸಭಾವಂದನ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆ.ತಾರಾನಾಥ ಹೊಳ್ಳ, ಜನಾರ್ದನ ಹಂದೆ, ಆನಂದ್ ಆಚಾರ್, ರಮೇಶ್ ಭಂಡಾರಿ, ಶಶಿಧರ ಮಯ್ಯ, ಚಂದ್ರಶೇಖರ್ ಸೋಮಯಾಜಿ, ಶ್ರೀಕಾಂತ್ ಐತಾಳ್, ನಾಗರಾಜ್ ಹಂದೆ, ಸೂರ್ಯನಾರಾಯಣ ಅವರನ್ನು ಅಭಿನಂದಿಸಲಾಯಿತು.
ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಮಾಧುರಿ ಶ್ರೀರಾಮ್ ಸ್ವಾಗತಿಸಿ, ನಿರೂಪಿಸಿದರು.