

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಹಿರಿಯರ ನೆನಪು ಕಾರ್ಯಕ್ರಮ ಸರಣಿಯಲ್ಲಿ ಗಡಿನಾಡಿನ ಹಿರಿಯ ಕಲಾವಿದ ಕೀರ್ತಿಶೇಷ ಉಪ್ಪಳ ಕೃಷ್ಣ ಮಾಸ್ತರ್ ಸಂಸ್ಮರಣೆ, ಹೊಸಂಗಡಿ ಯಕ್ಷ ಬಳಗ ತಂಡದ ಕರ್ಕಾಟಕ ಮಾಸ ಯಕ್ಷಗಾನ ತಾಳಮದ್ದಳೆ ಕೂಟ ಸಮಾರೋಪ ಇತ್ತೀಚೆಗೆ ಮೂಡಂಬೈಲು ಅಪ್ಪತ್ತಿಮಾರು ಶಿವರಾಮ ಪದಕಣ್ಣಾಯರ ಮನೆಯಲ್ಲಿ ಜರುಗಿತು.
ಶಿವರಾಮ ಪದಕಣ್ಣಾಯ ಅಪ್ಪತ್ತಿಮಾರು ದಂಪತಿಗಳು ಉದ್ಘಾಟಿಸಿದರು. ದಡ್ಡಂಗಡಿ ಬಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಯೋಗೀಶ ರಾವ್ ಚಿಗುರುಪಾದೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಕನ್ನಡ ಸಾಹಿತ್ಯ ಪರಿಷತ್ ಗಡಿನಾಡು ಕಾಸರಗೋಡು ಘಟಕ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಚೇತನರಾಮ ಪಜಿಂಗಾರು, ಭಾಸ್ಕರ ಕೋಳ್ಯೂರು ಭಾಗವಹಿಸಿದ್ದರು. ಯಕ್ಷ ಬಳಗ ಹೊಸಂಗಡಿ ತಂಡದ ನಾಗರಾಜ ಪದಕಣ್ಣಾಯ ಸ್ವಾಗತಿಸಿದರು. ವಕೀಲ ವಿಠಲ ಭಟ್ ಮೊಗಸಾಲೆ ನಿರ್ವಹಿಸಿದರು. ಹಿಮ್ಮೇಳ ಗುರು, ಹಿರಿಯ ಹಿಮ್ಮೇಳ ವಾದಕ ಭಾಸ್ಕರ ಕೋಳ್ಯೂರು ಅವರನ್ನು ಗೌರವಿಸಲಾಯಿತು. ನುರಿತ ಕಲಾವಿದರಿಂದ ಭೀಷ್ಮ ಸೇನಾಧಿಪತ್ಯ ಸ್ವೀಕಾರ ತಾಳಮದ್ದಳೆ ಜರುಗಿತು. ತಾಳಮದ್ದಳೆ ಹಿಮ್ಮೇಳದಲ್ಲಿ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ, ರತ್ನಾಕರ ಆಳ್ವ ದೇವಿಪುರ ತಲಪಾಡಿ, ಚೆಂಡೆ ಮದ್ದಳೆಯಲ್ಲಿ ಭಾಸ್ಕರ ಕೋಳ್ಯೂರು, ರಾಜಾರಾಮ ಬಲ್ಲಾಳ ಚಿಪ್ಪಾರು, ಅಚ್ಯುತ ಪದಕಣ್ಣಾಯ, ಚಕ್ರತಾಳ ಪ್ರಕಾಶ್ ಕಿನ್ಯ ಸಹಕರಿಸಿದರು. ಪಾತ್ರ ವರ್ಗದಲ್ಲಿ ವಿಟ್ಲ ಶಂಭು ಶರ್ಮ, ರಾಧಾಕೃಷ್ಣ ಕಲ್ಚಾರ್ ರಂಜಿಸಿದರು.