ಯಕ್ಷಗಾನ ಶ್ರವಣ ಶೈಲಿಯ ವಿಶಿಷ್ಟ ಕಲೆ

26manju7
ಬೆಳಗಾವಿ ನಗರದ ರಾಣಿ ಚನ್ನಮ್ಮ ವಿವಿ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹಳಗನ್ನಡ ಕಾವ್ಯ ರಸಗ್ರಹಣ ಕಾರ್ಯಕ್ರಮದಲ್ಲಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಸಿ.ಎಂ. ತ್ಯಾಗರಾಜ, ಎಸ್. ಗಂಗಾಧರಯ್ಯ, ಡಿ.ಎನ್. ಪಾಟೀಲ, ಎಂ.ಎ. ಸ್ವಪ್ನ ಇತರರಿದ್ದರು.
Published on

ಬೆಳಗಾವಿ: ಯಕ್ಷಗಾನ ತಾಳಮದ್ದಳೆ ಕರ್ನಾಟಕದ ಕರಾವಳಿ ಭಾಗದಲ್ಲಿ ಪ್ರಚಲಿತವಿರುವ ಶ್ರವಣ ಕಲೆ. ಇದು ಯಕ್ಷಗಾನ ಶೈಲಿಯ ಭಾಗವಾಗಿದ್ದರೂ ನೃತ್ಯ-ವೇಷಭೂಷಣವಿಲ್ಲದ ಬರಹರಹಿತ ರೂಪವಾಗಿದೆ ಎಂದು ರಾಣಿ ಚನ್ನಮ್ಮ ವಿವಿ ಉಪಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಹೇಳಿದರು.

ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಶಾಸೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಪಿಎಂ ಉಷಾ ಮೇರು ಯೋಜನೆಯಡಿ ಈಚೆಗೆ ಹಮ್ಮಿಕೊಂಡಿದ್ದ ಹಳಗನ್ನಡ ಕಾವ್ಯ ರಸಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಾವಿದರು ತಾಳಮದ್ದಳೆ ಬಳಸಿ ಪುರಾಣಗಳ ಕಥಾನಕಗಳನ್ನು ಗಾಯನ-ವಿದ್ವತ್ ಸಂವಾದದ ಮೂಲಕ ಪ್ರಸ್ತುತಪಡಿಸುತ್ತಾರೆ. ಇಂತಹ ಅಮೋಘ ಕಲೆಯನ್ನು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಿಡಸೋಸಿ ಮಠದ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಯಕ್ಷಗಾನ ಕಲೆ ಮುಖ್ಯವಾಗಿ ಕೇಳುಗರ ಧ್ಯಾನ ಹಾಗೂ ಕಾವ್ಯಗ್ರಹಣ ಶಕ್ತಿ ಪರೀಕ್ಷಿಸುತ್ತದೆ. ಕಲಾವಿದರು ಪಾಠ, ಪುರಾಣ ಮತ್ತು ತತ್ತ್ವಗ್ರಂಥಗಳ ಆಧಾರದ ಮೇಲೆ ತೀಕ್ಷ್ಣವಾದ ವಿಚಾರಸರಣಿ ಅನಾವರಣಗೊಳಿಸುತ್ತಾರೆ. ಕನ್ನಡ ನಾಡಿನ ಶ್ರವಣ ಕಲೆಯಲ್ಲಿ ಇದು ವಿಶಿಷ್ಟವಾಗಿದ್ದು, ಕಾವ್ಯ, ಸಂಗೀತ, ತರ್ಕ ಮತ್ತು ಭಕ್ತಿಯ ಸುಂದರ ಸಮನ್ವಯವಿದೆ. ಯಕ್ಷಗಾನ ತಾಳಮದ್ದಳೆ ಭಾರತೀಯ ಶ್ರವಣ ಸಂಸ್ಕೃತಿಯ ಜೀವಂತ ಮಾದರಿಯಾಗಿದೆ ಎಂದರು.

ಡಾ.ವಿ.ಎಸ್.ಮಾಳಿ, ಪ್ರೊ.ಎಸ್.ಗಂಗಾಧರಯ್ಯ, ವೌಲ್ಯಮಾಪನ ಕುಲಸಚಿವ ಪ್ರೊ. ಡಿ.ಎನ್. ಪಾಟೀಲ, ಹಣಕಾಸು ಅಕಾರಿ ಎಂ.ಎ. ಸ್ವಪ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net