ಕಮ್ಮಟಗಳ ಮೂಲಕ ಯಕ್ಷಗಾನ ಉಳಿಯಬೇಕು

12sgr3
ನಂದೋಡಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು. ನಾಗರಾಜ ಮಗಳ್ಳೆ, ರಮೇಶ್ ಇತರರಿದ್ದರು.
Published on

ಸಾಗರ: ಯುವಜನಾಂಗದ ವಲಸೆಯಿಂದಾಗಿ ಯಕ್ಷಗಾನ ಪ್ರದರ್ಶನಗಳು ಕಡಿಮೆಯಾಗುತ್ತಿದೆ. ಕಮ್ಮಟಗಳ ಮೂಲಕ ಯಕ್ಷಗಾನ ಕಲೆಯನ್ನು ಇನ್ನಷ್ಟು ಪ್ರಚುರಪಡಿಸುವ ಅಗತ್ಯವಿದೆ ಎಂದು ಹಿರಿಯ ಕಲಾವಿದ ಐ.ಎನ್.ಶೇಷಗಿರಿ ತಿಳಿಸಿದರು.

ತಾಲೂಕಿನ ನಂದೋಡಿಯಲ್ಲಿ ಮಹಾಗಣಪತಿ ಯಕ್ಷಕಲಾ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಯಕ್ಷಗಾನ ಕಮ್ಮಟ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮರಗುಡಿ ಸೀಮೆಯು ಯಕ್ಷಗಾನ ಕಲೆಗೆ ಅತ್ಯಂತ ಹೆಸರುವಾಸಿಯಾಗಿತ್ತು. ಆದರೆ ಗ್ರಾಮೀಣ ಭಾಗದ ಯುವಜನರು ಉದ್ಯೋಗ ಇನ್ನಿತರ ಕಾರಣಗಳಿಗೆ ನಗರಕ್ಕೆ ವಲಸೆ ಹೋಗಿz್ದÁರೆ. ಇದರಿಂದ ಯಕ್ಷಗಾನ ಕಲೆಯನ್ನು ಮುಂದುವರೆಸಿಕೊAಡು ಹೋಗುವವರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವತ್ತ ಎಲ್ಲರ ಗಮನ ಅಗತ್ಯ ಎಂದರು.
ಕಮ್ಮಟದ ನಿರ್ದೇಶಕ ರಮಾನಂದ ಹೆಗಡೆ ನಂದೋಡಿ ಮಾತನಾಡಿ, ಯಕ್ಷಗಾನ ಕಲೆ ಅತ್ಯಂತ ಸಮೃದ್ಧವಾಗಿದೆ. ಯಕ್ಷಗಾನ ಕಲಿಕೆಗೆ ಬೇಕಾದ ಮಾಹಿತಿ ಪಡೆಯಲು ಇಂತಹ ತರಬೇತಿ ಶಿಬಿರಗಳ ಅಗತ್ಯ ಹೆಚ್ಚಿದೆ. ಒಂದು ದಿನದ ಕಮ್ಮಟದ ಮೂಲಕ ಯಕ್ಷಗಾನದ ಬಗ್ಗೆ ಪೂರ್ಣ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಶಾಲ ತಳಹದಿಯ ಮೇಲೆ ಕಮ್ಮಟ ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಭಾಗವತ ನಾಗರಾಜ ಮಗಳ್ಳೆ, ಐ.ಎಸ್.ರಮೇಶ್ ಇತರರಿದ್ದರು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net