

ಹುಬ್ಬಳ್ಳಿ : ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ನಗರದ ಆರ್.ಎನ್. ಶೆಟ್ಟಿ ಹಾಲ್ನಲ್ಲಿ ಜು. 6 ರಂದು ರಾತ್ರಿ 7 ಗಂಟೆಗೆ ‘ದಕ್ಷ ಯಜ್ಞ ಶಿವದೂತ ಪಂಜುರ್ಲಿ’ ಕುರಿತು ಯಕ್ಷಗಾನ ಆಯೋಜಿಸಲಾಗಿದೆ.
ಭಾಗವತರಾಗಿ ಸದಾಶಿವ ಅಮಿನ್ ಕೊಕ್ಕರ್ಣೆ, ಗಣೇಶ ಆಚಾರ್ಯ ಬಿಲ್ಲಾಡಿ ಪಾಲ್ಗೊಳ್ಳುವರು. ದಿನಕರ ಕುಂದರ ನಡೂರು, ನಾಗರಾಜ ದೇವಲ್ಕುಂದ, ರಾಕೇಶ ಶೆಟ್ಟಿ ಮೇಗರವಳ್ಳಿ ಸ್ತ್ರೀ ವೇಷಧಾರಿಯಾಗಿ, ಸತೀಶ ಮೊಗವೀರ, ಹಾಲಾಡಿ ಹಾಸ್ಯ ಕಲಾವಿದರಾಗಿ ಭಾಗವಹಿಸುವರು.