ಯಕ್ಷಗಾನ ತಾಳಮದ್ದಳೆ ಪ್ರದರ್ಶನ

Yakshagana rhythm performance
ಸಿದ್ದಾಪುರ ತಾಲೂಕಿನ ದಂಟಕಲ್‌ನಲ್ಲಿ ಪಂಚವಟಿ ಯಕ್ಷಗಾನ ತಾಳಮದ್ದಳೆ ನಡೆಯಿತು.
Published on

ಸಿದ್ದಾಪುರ: ಯಕ್ಷಚಂದನ ದಂಟಕಲ್ ಅವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಯಕ್ಷಗಾನ ಕಲಾವಿದ ದಿ. ಗಣಪತಿ ಹೆಗಡೆ ಸ್ಮರಣಾರ್ಥ ದಂಟಕಲ್ಲಿನಲ್ಲಿ ಪಂಚವಟಿ ಯಕ್ಷಗಾನ ತಾಳಮದ್ದಳೆ ಶನಿವಾರ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ ಹೆಗಡೆ ದಂಟಕಲ್, ನಂದನ ಹೆಗಡೆ ದಂಟಕಲ್, ಮದ್ದಳೆಯಲ್ಲಿ ಶಂಕರ ಭಾಗವತ ಯಲ್ಲಾಪುರ, ಚಂಡೆಯಲ್ಲಿ ರಘುಪತಿ ಹೆಗಡೆ ಹೂಡೇಹದ್ದ ಸಹಕರಿಸಿದರು. ಮುಮ್ಮೇಳದಲ್ಲಿ ಕಾತ್ಯಾಯಿನಿ ಹೆಗಡೆ (ರಾಮ), ಸುಜಾತಾ ಎಸ್.ಹೆಗಡೆ (ಲಕ್ಷ್ಮಣ), ಗೀತಾ ಸುರೇಶ ಹೆಗಡೆ ಬೆಳಸಲಗೆ (ಶೂರ್ಪನಖಿ), ರತ್ನಾ ಹೆಗಡೆ ಅತ್ತಿಕೊಪ್ಪ (ಸೀತೆ), ನಿತಿನ್ ಹೆಗಡೆ ದಂಟಕಲ್ (ಋಷಿ) ಪಾತ್ರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net