ನಗರದ ವಿವಿಧೆಡೆ ಯಕ್ಷಗಾನ ಕಾರ್ಯಕ್ರಮ

f15060152151453.6318c4ab64dcf
Published on

ಬೋಗಾದಿಯ ಮಹಾಲಿಂಗೇಶ್ವರ ಸೇವಾ ಸಮಿತಿ ಹಾಗೂ ಧರ್ಮಸ್ಥಳದ ನಿಡ್ಲೆಯ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ನಗರದ ವಿವಿಧೆಡೆ ಸೆ.8 ರಿಂದ 10ರವರೆಗೆ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಸೆ.8ರಂದು ಸಂಜೆ 6.30ಕ್ಕೆ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗ, ಸೆ.9ರಂದು ಸಂಜೆ 6ಕ್ಕೆ ಬೋಗಾದಿಯ ಮಾತಾ ಅಮೃತಾನಂದಮಯಿ ಮಠದಲ್ಲಿ ಮಹರ್ಷಿ ಅಗಸ್ತ್ಯ ಪ್ರಸಂಗ, ಕೆ.ಹೆಮ್ಮನಹಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸೆ.10ರಂದು ಸಂಜೆ 4ಕ್ಕೆ ಸಂಪೂರ್ಣ ರಾಮಾಯಣ ಪ್ರಸಂಗ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net