ತಿಮ್ಮನಹಳ್ಳಿಯಲ್ಲಿ ಯಕ್ಷಗಾನ ಪ್ರದರ್ಶನ

FotoJet (2)
Published on

 ಚಿಕ್ಕನಾಯಕನಹಳ್ಳಿ: ತಾಲೂಕಿನ ತಿಮ್ಮನಹಳ್ಳಿಯ ಶ್ರೀ ರಾಮಚಂದ್ರ ಕೃಪಾಪೋಷಿತ ಭಕ್ತ ಮಂಡಳಿ ಹಾಗೂ ವಿಜಯ ವಿನಾಯಕ ರೈತ ಸಂಘದವರು 73ನೇ ವರ್ಷದ ಶ್ರೀವಿನಾಯಕಸ್ವಾಮಿ ಅವರ ಮಹೋತ್ಸವದ ಪ್ರಯುಕ್ತ ಗುರುವಾರ ತುಮಕೂರಿನ ಯಕ್ಷ ದೀವಿಗೆ ತಂಡದವರಿಂದ ಜಾಂಬವತಿ ಕಲ್ಯಾಣವೆಂಬ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿತ್ತು.

ತಾಲೂಕು ತಿಮ್ಮನಹಳ್ಳಿಯ ಗಣಪತಿ ಪೆಂಡಾಲ್​ನಲ್ಲಿ ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನಗೊಂಡಿದ್ದು, ಕೃಷ್ಣನ ವೇಷಧಾರಿಯಾಗಿ ಡಾ.ಆರತಿ ಪಟ್ರಮೆ, ಜಾಂಬವಂತನ ಪಾತ್ರದಲ್ಲಿ ಡಾ.ಗೋವಿಂದ ಪ್ರಸಾದ ಕಜೆ, ಬಲರಾಮನ ಪಾತ್ರದಲ್ಲಿ ಡಾ.ಸಿಬಂತಿ ಪದ್ಮನಾಭ ಕೆ.ವಿ. ಹಾಗೂ ಜಾಂಬವತಿ ಪಾತ್ರದಲ್ಲಿ ಕು.ಆದಿತಿ ಕೃಷ್ಣ ಮನೋಜ್ಞವಾಗಿ ನಟಿಸಿದರು.

ಯಕ್ಷದಿವಿಗೆ ಸಂಸ್ಥೆಯು ತನ್ನ ದಶಮಾನೋತ್ಸವದ ಪ್ರಯುಕ್ತ ಜಿಲ್ಲೆಯ ಹಲವೆಡೆ ಕಾರ್ಯಕ್ರಮವನ್ನು ನೀಡುತ್ತಿದೆ. ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಯಕ್ಷಗಾನ ಚಟುವಟಿಕೆಯನ್ನು ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿರುವ ಬಗ್ಗೆ ತಿಳಿದು ತಿಮ್ಮನಹಳ್ಳಿಯ ಜನರು ಹರ್ಷ ವ್ಯಕ್ತಪಡಿಸಿದರು.

ವಿಜಯ ವಿನಾಯಕ ರೈತ ಸಂಘದ ಅಧ್ಯಕ್ಷ ವಸಂತಯ್ಯ, ಶ್ರೀ ಶಾರದ ವಿದ್ಯಾಪಿಠ ಸಂಸ್ಥೆಯ ಕಾರ್ಯದರ್ಶಿ ರಂಗನಾಥ್​, ತಾ.ಕನ್ನಡ ಸಾಹಿತ್ಯ ಪರಿಷತ್​ನ ಪದಾಧಿಕಾರಿ ಕಾಂತರಾಜು ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net