

ಪೆರ್ಲ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಅ.25ರಂದು ಸಂಜೆ ಶ್ರೀರಾಮಮಂದಿರದ ರಂಗಮಂಟಪದಲ್ಲಿಸತೀಶ ಪುಣಿಚಿತ್ತಾಯ ಮತ್ತು ತಂಡದಿಂದ ವಾಲಿಮೋಕ್ಷ ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
ಅಯೋಧ್ಯಾ ರಾಮ ಮಂದಿರ ನಿರ್ಮಾಣ ಸಮಿತಿ ಉಸ್ತುವಾರಿ, ವಿಶ್ವಹಿಂದು ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ಜಿ, ಟಾಟಾ ಸಂಸ್ಥೆ, ಎಲ್ ಆಂಡ್ ಟಿ ಸಂಸ್ಥೆಯ ಅಧಿಕಾರಿಗಳು ಮತ್ತು ಕಾರ್ಮಿಕರು ಕನ್ನಡ ಭಾಷೆಯ ಪ್ರಸಂಗವನ್ನು ವೀಕ್ಷಿಸಿದರು. ಟಾಟಾ ಸಂಸ್ಥೆಯ ಅಧಿಕಾರಿಗಳು ಮುಂದೆ ಹಿಂದಿ ಯಕ್ಷಗಾನ ಮಾಡಬೇಕೆಂದು ಸಲಹೆ ನೀಡಿದರು.
ಭಾಗವತರಾಗಿ ಡಾ.ಸತೀಶ್ ಪುಣಿಚಿತ್ತಾಯ ಪೆರ್ಲ, ಚೆಂಡೆ-ಮದ್ದಳೆಯಲ್ಲಿ ಸಮೃದ್ಧ ಪುಣಿಚಿತ್ತಾಯ, ಮುರಳೀಧರ ಬಟ್ಯಮೂಲೆ, ಪಾತ್ರವರ್ಗದಲ್ಲಿ ವಾಲಿಯಾಗಿ ವಿನೋದ್ ಕುಮಾರ್ ಪೆರ್ಲ, ಸುಗ್ರೀವನಾಗಿ ಭವಿಷ್ ಭಂಡಾರಿ ಪುತ್ತೂರು, ರಾಮನಾಗಿ ಶೇಣಿ ವೇಣುಗೋಪಾಲ ಭಟ್ ಪಾತ್ರವಹಿಸಿದ್ದರು.