ಹರ್ಕೂರು ಸರ್ಕಾರಿ ಶಾಲೆ ಅಭಿವೃದ್ಧಿಗೆ ಯಕ್ಷಗಾನ ಪ್ರದರ್ಶನ

17gan3
Published on

ಕುಂದಾಪುರ: ಕನ್ನಡ ವಾಧ್ಯಮದಲ್ಲಿ ಕಲಿತ ಮಕ್ಕಳು ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಹರ್ಕೂರು ದಕ್ಷಿಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ (ನಾರ್ಕಳಿ ಶಾಲೆ) ಹಳೆ ವಿದ್ಯಾರ್ಥಿಗಳ ಸಂ ಹಾಗೂ ಶ್ರೀ ಪೆರ್ಡೂರು ಮೇಳದ ಸಂಯುಕ್ತ ಆಶ್ರಯದಲ್ಲಿ ಆಲೂರಲ್ಲಿ ಮೇ 18ರಂದು ರಾತ್ರಿ 9 ಗಂಟೆಗೆ ‘ಪರ್ಣ ಕುಟೀರ’ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

1941ರಲ್ಲಿ ಆರಂಭಗೊಂಡ ಹರ್ಕೂರು ಶಾಲೆ 84 ವರ್ಷಗಳ ಇತಿಹಾಸ ಹೊಂದಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿರುವ ಶಾಲೆಯ ಅಭಿವೃದ್ಧಿಗಾಗಿ ಹಳೇ ವಿದ್ಯಾರ್ಥಿ ಸಂವು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಎನ್ನುವ ಶಿರ್ಷಿಕೆಯಡಿ ಶಾಲೆ ಉಳಿಸಲು ಮುಂದಾಗಿದೆ. ಅದರ ಭಾಗವಾಗಿ ಯಕ್ಷಗಾನ ಆಯೋಜಿಸಿದ್ದು, ಅದರಿಂದ ಉಳಿದ ಹಣವನ್ನು ಶಾಲೆ ಅಭಿವೃದ್ಧಿಗೆ ಬಳಸಲು ತೀರ್ವಾನಿಸಲಾಗಿದೆ. 5ನೇ ತರಗತಿವರೆಗೆ ಶಾಲೆಯಲ್ಲಿ ಕಳೆದ ಸಾಲಿನಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ವಾಡುತ್ತಿದ್ದರು. ಇಬ್ಬರು ಶಿಕ್ಷಕಿಯರಿದ್ದು, ಓರ್ವ ಗೌರವ ಶಿಕ್ಷಕಿಯಿದ್ದಾರೆ. 1ರಿಂದ 5ನೇ ತರಗತಿ ವರೆಗೂ ಇಂಗ್ಲಿಷ್, ಕಂಪ್ಯೂಟರ್ ಕಲಿಸಲಾಗುತ್ತಿದೆ. ಆಟದ ಮೈದಾನ, ಸುಸಜ್ಜಿತ ಶಾಲಾ ಕಟ್ಟಡವಿದೆ. ದಾನಿಗಳಿಂದ ಕಂಪ್ಯೂಟರ್, ಪ್ರಿಂಟರ್, ಇನ್ವರ್ಟರ್, ಕಂಪ್ಯೂಟರ್ ಟೇಬಲ್‌ಗಳನ್ನು ಪಡೆದುಕೊಳ್ಳಲಾಗಿದೆ.

ಶಾಲೆಗೆ ಶುದ್ಧ ಕುಡಿಯುವ ನೀರಿನ ಟಕ, ಸ್ಮಾರ್ಟ್ ಕ್ಲಾಸ್ ಆರಂಭ, ಆಟದ ಮೈದಾನ ವಿಸ್ತರಣೆ, ದೂರದ ಊರುಗಳಿಂದ ಬರುವ ಮಕ್ಕಳಿಗೆ ಶಾಲಾ ವಾಹನ ಸೌಲಭ್ಯ ಸಹಿತ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲಾ ಎಸ್‌ಡಿಎಂಸಿ ಹಾಗೂ ಹಳೇ ವಿದ್ಯಾರ್ಥಿ ಸಂ ಹಲವು ಯೋಜನೆಗಳನ್ನು ಹಾಕಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net