

ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನ ಕೇಂದ್ರ ಇಂದ್ರಾಳಿ, ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಉಜ್ವಲ ಡೆವಲಪರ್ಸ್ ಉಡುಪಿ ಆಶ್ರಯದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ (ರಿ.) ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ ಸ್ಮರಣಾರ್ಥ ಬಡಗುತಿಟ್ಟು ಯಕ್ಷಗಾನ ಖ್ಯಾತ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಅವರಿಗೆ ಯಕ್ಷ ಸಾಧಕ ಪ್ರಶಸ್ತಿ ನೀಡಲಾಗುತ್ತಿದೆ.
ಜು.19ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ಪುರಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿ ಪ್ರದಾನದ ಬಳಿಕ ಯಕ್ಷಗಾನದ ದಿಗ್ಗಜ ಕಲಾವಿದರಿಂದ ಕೃಷ್ಣಾರ್ಜುನ ಕಾಳಗ ಹಾಗೂ ರಾಜಾ ಭದ್ರಸೇನ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರ್ ಜನ್ಸಾಲೆ, ಚಂಡೆ- ಪ್ರಜ್ವಲ ಮುಂಡಾಡಿ, ಮದ್ದಳೆ- ಶಶಾಂಕ ಆಚಾರ್ಯ ಕಿರಿಮಂಜೇಶ್ವರ ಪಾಲ್ಗೊಳ್ಳಲಿದ್ದಾರೆ. ಕೃಷ್ಣಾರ್ಜುನ ಕಾಳಗದ ಮುಮ್ಮೇಳದಲ್ಲಿ ಅರ್ಜುನನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣ- ನೀಲ್ಕೋಡು ಶಂಕರ ಹೆಗಡೆ, ಸುಭದ್ರೆ- ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ದಾರುಕ- ರವೀಂದ್ರ ದೇವಾಡಿಗ, ಅಭಿಮನ್ಯು- ಚಂದ್ರಹಾಸ ಗೌಡ ಹೊಸಪಟ್ನ, ಭೀಮ- ಕೆ.ಜಿ.ಕಾರ್ತಿಕ, ರುಕ್ಮಿಣಿ- ಸುಧೀರ ಉಪ್ಪೂರು. ರಾಜಾ ಭದ್ರಸೇನ ಮುಮ್ಮೇಳದಲ್ಲಿ ಭದ್ರಸೇನನಾಗಿ ವಿದ್ಯಾಧರ ರಾವ್ ಜಲವಳ್ಳಿ, ದೃಢವರ್ಮ- ಕಾರ್ತಿಕ ಕಣ್ಣಿಮನೆ, ವತ್ಸಾಖ್ಯ- ಉದಯ ಹೆಗಡೆ ಕಡಬಾಳ, ವಿದ್ಯುಲ್ಲೋಚನ- ಪವನಕುಮಾರ್ ಸಾನ್ಮನೆ, ರತ್ನಾವತಿ- ಸಂತೋಷ ಹಿಲಿಯಾಣ ಪಾತ್ರ ನಿರ್ವಹಿಸಲಿದ್ದಾರೆ ಎಂದು ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.