

ಉಡುಪಿ : ಸಮಾಜದ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಸೇವೆ. ನಿಸ್ಪೃಹ ಕಾರ್ಯಕರ್ತರಿಂದ ಕೂಡಿದ ಯಕ್ಷಗಾನ ಕಲಾರಂಗ ಮಾದರಿ ಸಂಸ್ಥೆ ಎಂದು ಹಾದಿಗಲ್ಲು ಅಭಯಲಕ್ಷ್ಮಿ ನರಸಿಂಹ ದೇವಸ್ಥಾನದ ಧರ್ಮದರ್ಶಿ ಹಾದಿಗಲ್ಲು ಲಕ್ಷ್ಮಿನಾರಾಯಣ ಹೇಳಿದರು.
ಬುಧವಾರ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ಬ್ರಹ್ಮಾವರ ತಾಲೂಕಿನ ನಿಂಜೂರುಬೆಟ್ಟಿನ ಜಯಲಕ್ಷಿ$್ಮ ಇವರಿಗೆ ಪಿ. ಉಪೇಂದ್ರ ನಾಯಕ್ ಸ್ಮರಣಾರ್ಥ ಯು. ಎಸ್. ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ದಲ್ಲಿ ನಿರ್ಮಿಸಿದ ಉಪೇಂದ್ರ ನಿಲಯ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು.
ಯು. ಎಸ್.ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ನ ವಿಶ್ವಸ್ಥ ಪಿ. ಸುರೇಶ್ ನಾಯಕ್ ದೀಪ ಬೆಳಗಿದರು. ಕೆ. ಬಾಲಕೃಷ್ಣ ಹೆಗ್ಡೆ ಅಭ್ಯಾಗತರಾಗಿದ್ದರು. ವಿನ್ಸೆಂಟ್ ಲುಯಿಸ್, ಜಾನೆಟ್ ಲುಯಿಸ್, ಸಂಸ್ಥೆಯ ದಾನಿಗಳಾದ ಯು. ವಿಶ್ವನಾಥ ಶೆಣೈ, ಯು. ಶ್ರೀಧರ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರುಗಳಾದ ಅನಂತರಾಜ್ ಉಪಾಧ್ಯ, ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಕೃಷ್ಣಮೂರ್ತಿ ಭಟ್, ಅಜಿತ್ ಕುಮಾರ್, ಎಚ್. ಎನ್. ವೆಂಕಟೇಶ್, ಗಣೇಶ್ ಬ್ರಹ್ಮಾವರ, ಸುದರ್ಶನ ಬಾಯರಿ ಹಾಗೂ ಕೆ. ಎಸ್. ಶ್ರೀನಿವಾಸ್ ನಾಯಕ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು.