ಬದುಕಿಗೆ ಸಂಸ್ಕಾರ ನೀಡುವ ಕಲೆ ಯಕ್ಷಗಾನ

SDP YAKSHAGANA
Published on

ಸಿದ್ದಾಪುರ: ಯಕ್ಷಗಾನ ಕಲೆ ನಮ್ಮ ಬದುಕಿಗೆ ಸಂಸ್ಕಾರ ನೀಡುತ್ತವೆ. ಪುರಾಣ ಆಧಾರಿತ ಕತೆಗಳೇ ಹೆಚ್ಚಾಗಿ ಪ್ರದರ್ಶನಗೊಳ್ಳುವುದರಿಂದ ಜೀವನದ ವಿವಿಧ ಒತ್ತಡಗಳಿಂದ ಉಂಟಾದ ಉದ್ವೇಗಗಳಿಗೆ ಕಡಿವಾಣವೂ ಇಲ್ಲಿ ಆಗುತ್ತದೆ. ಯಕ್ಷಗಾನ ಸತ್ಯ-ಧರ್ಮ-ನ್ಯಾಯ ಪರಿಪಾಲನೆಯ ಸಂದೇಶವನ್ನು ಸಾರುತ್ತವೆ ಎಂದು ಇಟಗಿ ಪ್ರೌಢ ಶಾಲಾ ಮುಖ್ಯಾಧ್ಯಾಪಕ ಡಿ.ಜಿ. ಪೂಜಾರ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಕಲಾಭಾಸ್ಕರ ಇಟಗಿ ಅವರು ತಾಲೂಕಿನ ಇಟಗಿ ರಾಮೇಶ್ವರ ದೇವಾಲಯದ ಸಭಾಂಗಣದಲ್ಲಿ ಗುರುವಾರದಿಂದ ಆಯೋಜಿಸಿರುವ ನಾಲ್ಕು ದಿನಗಳ ಯಕ್ಷೋತ್ಸವ-2024 ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಇಟಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಹೆಗಡೆ ಕೊಡ್ತಗಣಿ ಮಾತನಾಡಿ, ಸಂಘಟನೆಗೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು. ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದರು.

ಗಜಾನನ ಹೆಗಡೆ ಕೊಡ್ತಗಣಿ, ಅನಂತ ರಾಮಚಂದ್ರ ಭಟ್ಟ ಇಟಗಿ, ಗ್ರಾಪಂ ಉಪಾಧ್ಯಕ್ಷ ರಾಮಚಂದ್ರ ನಾಯ್ಕ ಹರಗಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು. ನಂತರ ಹೊಸತೋಟ ಮಂಜುನಾಥ ಭಾಗವತ ವಿರಚಿತ ಸೀತಾಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಏ.ಟಿ. ಯಜ್ಞೇಶ್ವರ ಅಂಬಾರಗೊಡ್ಲು, ಶ್ರೀಪಾದ ಭಟ್ಟ ಮೂಡ್ಗಾರು, ಗಣೇಶ ಭಟ್ಟ ಕೆರೆಕೈ ಸಹಕರಿಸಿದರು. ಲಕ್ಷ್ಮೀಕಾಂತ ಹೆಗಡೆ ಕೊಂಡದಕುಳಿ (ದಶರಥ), ಅಂಸಳ್ಳಿ ಈಶ್ವರ ಭಟ್ಟ (ವಿಶ್ವಾಮಿತ್ರ), ಮಹಾಬಲೇಶ್ವರ ಭಟ್ಟ ಇಟಗಿ( ಶ್ರೀರಾಮ), ಶಿವಕುಮಾರ ನಾಯ್ಕ ಶಿರಳಗಿ (ಲಕ್ಷ್ಮಣ), ಮಂಜುನಾಥ ಶೆಟ್ಟಿ ಕಾಳೇನಲ್ಲಿ (ರಾವಣ), ನಾಗೇಂದ್ರ ಮೂರುರು (ದೂತ ಮತ್ತು ವಶಿಷ್ಠ), ವೆಂಕಟೇಶ ಹೆಗಡೆ ಬೊಗರಿಮಕ್ಕಿ (ತಾಟಕಿ), ಗಣಪತಿ ಹೆಗಡೆ ಹೊನ್ನೆಕೈ (ಸುಬಾಹು), ವೆಂಕಟಗಿರಿ ಹೆಗಡೆ ಚಪ್ಪರಮನೆ (ಜನಕ), ನಾಗಪತಿ ಹೆಗಡೆ ಕೊಪ್ಪ (ಸೀತೆ) ಪಾತ್ರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net