ಸಂಸ್ಕೃತಿಯ ಪ್ರತೀಕ ಯಕ್ಷಗಾನ

11bkl1
Published on

ಭಟ್ಕಳ: ಹೊನ್ನಾವರ ತಾಲೂಕಿನ ಕವಲಕ್ಕಿ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದಿಂದ ನಾಟ್ಯಶ್ರೀ ಬೆಳ್ಳಿ ಸಂಭ್ರಮ ಸರಣಿ ತಾಳಮದ್ದಳೆ ಕಾರ್ಯಕ್ರಮ ಅಂಗವಾಗಿ ಮುರ್ಡೆಶ್ವರದ ಬಸ್ತಿಮಕ್ಕಿಯಲ್ಲಿರುವ ಆಚಾರ್ಯ ಭವನದಲ್ಲಿ ಕಿಷ್ಕಿಂದಾ ಆಖ್ಯಾನ ಪ್ರದರ್ಶಿಸಲಾಯಿತು.

ಅತಿಥಿಗಳಾದ ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆ ದಂಪತಿ, ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ ಗೋಳಿಕುಂಬ್ರಿ ಅಧ್ಯಕ್ಷ ನಾಗರಾಜ ಮಧ್ಯಸ್ಥ, ಹೊನ್ನಾವರ ಹವ್ಯಕ ಮಂಡಳದ ಅಧ್ಯಕ್ಷ ಆರ್.ಜಿ. ಹೆಗಡೆ ಅವರು ದೀಪ ಪ್ರಜ್ವಲನಗೈದು ಫಲ ಸಮರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಆಚಾರ್ಯ ಭವನದ ಪ್ರಮುಖ ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆ ಮಾತನಾಡಿ, ಯಕ್ಷಗಾನ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಯಕ್ಷಗಾನ ಎನ್ನುವ ಪದವೇ ನಮ್ಮನ್ನು ಧಾರ್ವಿುಕ ಜಾಗೃತಿಯತ್ತ ಕೊಂಡೊಯ್ಯತ್ತದೆ ಎಂದರು.

ಯಕ್ಷರಕ್ಷೆ ಮುರ್ಡೆಶ್ವರದ ಅಧ್ಯಕ್ಷ ಡಾ. ಐ.ಆರ್. ಭಟ್ಟ ಅವರಿಗೆ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ರಜತ ಗೌರವ ಸಮರ್ಪಿಸಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಫ್ರೊ. ಎಸ್. ಶಂಭು ಭಟ್ಟ ಕಡತೋಕ, ವಿದ್ವಾನ್ ನೀಲಕಂಠ ಯಾಜಿ ಬೈಲೂರು, ಕೊಂಡದಕುಳಿ ರಾಮಚಂದ್ರ ಹೆಗಡೆ, ಮೋಹನ ಭಾಸ್ಕರ ಹೆಗಡೆ, ಕೇಶವ ಕೊಳಗಿ ಇತರರು ಉಪಸ್ಥಿತರಿದ್ದರು.

ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಭಟ್ಟ ಕಬ್ಬಿನಗದ್ದೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ನಂತರ ನಡೆದ ಯಕ್ಷಗಾನ ತಾಳಮದ್ದಳೆ ಕಿಷ್ಕಿಂದಾ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಪರಮೇಶ್ವರ ಭಂಡಾರಿ ರ್ಕ, ಅರ್ಥಧಾರಿಗಳಾಗಿ ವಾಸುದೇವ ರಂಗಾ ಭಟ್ಟ, ರಾಮಚಂದ್ರ ಹೆಗಡೆ ಕೊಂಡದಕುಳಿ, ಜಿ.ಕೆ. ಹೆಗಡೆ ಹರಿಕೇರಿ ಭಾಗವಹಿಸಿದ್ದರು. ರಾಮನಾಗಿ ಭಾಗವಹಿಸಿದ್ದ ಮೋಹನ ಭಾಸ್ಕರ ಹೆಗಡೆ ಅವರ ಆರ್ಥಗಾರಿಕೆ ಎಲ್ಲರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net