ಹುಬ್ಬಳ್ಳಿಯಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ

Published on

ಹುಬ್ಬಳ್ಳಿ: ನುರಿತ ಮತ್ತು ಹವ್ಯಾಸಿ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಆಖ್ಯಾನ ಯಕ್ಷಗಾನ ಪ್ರದರ್ಶನವನ್ನು ಅ. 14ರಂದು ಸಂಜೆ 4ಕ್ಕೆ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.

ನರ್ತನ, ಚಂಡೆ ಮದ್ದಳೆಗಳ ಝೇಂಕಾರ, ಠೇಂಕಾರದ ವಾದನ, ಶೃತಿ, ರಾಗ, ಲಯ ತಾಳಗಳ ಸಮ್ಮಿಲನ, ರಂಗು ರಂಗಿನ ವೇಷಭೂಷಣಗಳ ಅನಾವರಣ ಮಾಡುವ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ಕಲಾ ಪೋಷಕ, ಸಮಾಜ ಸೇವಕ ದಿ. ಕಟ್ಟರೆ ಶಂಕರ ಶೆಟ್ಟಿ ಇವರ ಸ್ಮರಣಾರ್ಥ ಆಯೋಜಿಸಲಾಗಿದೆ.

ಹುಬ್ಬಳ್ಳಿ -ಧಾರವಾಡ ಕಲಾ ರಂಗದ ಹವ್ಯಾಸಿ ಬಂಟ ಕಲಾವಿದರ ಸಹಕಾರವಿದ್ದು, ಉಚಿತ ಪ್ರದರ್ಶನ ನಡೆಯಲಿದೆ. ನಂತರ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಹಿಮ್ಮೇಳದಲ್ಲಿ ಭಾಗವತರಾಗಿ ಮಂಜುನಾಥ ಹೆಗಡೆ ಧಾರವಾಡ, ಚಂಡೆ, ಮದ್ದಳೆಯಲ್ಲಿ ಶ್ರೀಪಾದ ಶೆಟ್ಟಿ, ನಾರಾಯಣ ಕೋಮಾರ ಸಹಕರಿಸಲಿದ್ದಾರೆ. ಸ್ತ್ರೀ ವೇಷಧಾರಿ ಸಂಜೀವ ಶೆಟ್ಟಿ ಹೆನ್ನಾಬೈಲ್, ಭಾಗವತರಾಗಿ ಮನೋಹರ ಹೆಗ್ಡೆ ಕತ್ತೂರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net