ಮೈಸೂರಿನಲ್ಲಿ ಸೆ. 8 ರಿಂದ 10ರವರೆಗೆ ಯಕ್ಷಗಾನ

Yakshagana
Published on

ಮೈಸೂರು: ಬೋಗಾದಿಯ ಮಹಾಲಿಂಗೇಶ್ವರ ಸೇವಾ ಸಮಿತಿ ಹಾಗೂ ಧರ್ಮಸ್ಥಳದ ನಿಡ್ಲೆಯ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ನಗರದ ವಿವಿಧೆಡೆ ಸೆ.8 ರಿಂದ 10ರವರೆಗೆ ಯಕ್ಷಗಾನ ಹಮ್ಮಿಕೊಳ್ಳಲಾಗಿದೆ ಸಮಿತಿ ಅಧ್ಯಕ್ಷ ಎಂ. ಗಣೇಶ ಹೇಳಿದರು.

ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಸೆ.8 ರಂದು ಸಂಜೆ 6.30ಕ್ಕೆ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗ, ಸೆ.9ರಂದು ಸಂಜೆ 6ಕ್ಕೆ ಬೋಗಾದಿಯ ಮಾತಾ ಅಮೃತಾನಂದಮಯಿ ಮಠದಲ್ಲಿ ಮಹರ್ಷಿ ಅಗಸ್ತ್ಯ ಪ್ರಸಂಗ, ಕೆ.ಹೆಮ್ಮನಹಳ್ಳಿಯ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸೆ.10ರಂದು ಸಂಜೆ 4ಕ್ಕೆ ಸಂಪೂರ್ಣ ರಾಮಾಯಣ ಪ್ರಸಂಗ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೇವಾ ಸಮಿತಿ ಕಾರ್ಯದರ್ಶಿ ಜಿ.ಎನ್. ಅನಂತವರ್ಧನ, ಖಜಾಂಚಿ ಪುಟ್ಟಸಿದ್ಧನಾಯಕ, ವಕೀಲರಾದ ಒ. ಶ್ಯಾಮ್ ಭಟ್, ಶಿವಶಾಸ್ತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net