

ಗೋಕರ್ಣ: ಹಿರೇಗುತ್ತಿಯ ಶ್ರೀ ನಾಡವೆಂಕಟೇಶ್ವರ ಮಂದಿರದಲ್ಲಿ ಯಕ್ಷಗಾನದ ಬಾಲಪ್ರತಿಭೆ ಅಂಕೋಲಾ ಬಳಿಯ ಹಿಚ್ಕಡ ಗ್ರಾಮದ ಶ್ರೀಶಾ ಅವರಿಂದ ತೆಂಕುತಿಟ್ಟು ಯಕ್ಷಗಾನ ಪದಗಳ ‘ಸವಿಗಾನ ಸೇವೆ’ ನಡೆಯಿತು.
ಯಕ್ಷಗಾನದ ವಿವಿಧ ಪ್ರಸಂಗಗಳ ಹಾಡುಗಳನ್ನು ಶಾಸ್ತ್ರೀಯ ಮತ್ತು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದ ಎಳೆಯ ಪ್ರತಿಭೆಯನ್ನು ಗ್ರಾಮದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಯಕ್ಷ ಕಲಾವಿದ ಮಂಜುನಾಥ ಗಾಂವಕರ ಬರ್ಗಿ ತೆಂಕುತಿಟ್ಟು ಯಕ್ಷಗಾನದ ಪ್ರತಿಭಾನ್ವಿತ ಗಾಯಕಿಯಾಗಿ ಪ್ರವರ್ಧಮಾನಕ್ಕೆ ಬರಬಲ್ಲ ಎಲ್ಲ ಅರ್ಹತೆ ಪಡೆದಿರುವ ಶ್ರೀಶಾ ಯಕ್ಷಗಾನ ಭಾಗವತಿಕೆಯಲ್ಲಿ ತನ್ನದೇ ಆದ ವಿಶಿಷ್ಟ ಮುದ್ರೆಯನ್ನು ಮೂಡಿಸಿ ಉತ್ತಮೋತ್ತಮ ಖ್ಯಾತಿ ಪಡೆಯುವಂತಾಗಬೇಕು ಎಂದರು.
ಗ್ರಾಪಂ ಅಧ್ಯಕ್ಷ ಶಾಂತ ಎನ್. ನಾಯಕ, ಸ್ಪಂದನ ಸಂಸ್ಥೆ ಅಧ್ಯಕ್ಷ ಎನ್. ರಾಮು, ಅರ್ಬನ್ ಬ್ಯಾಂಕ್ ನಿರ್ದೇಶಕ ರಾಮು ಕೆಂಚನ್, ಯುವಕ ಸಂಘ ಅಧ್ಯಕ್ಷ ಕೃಷ್ಣ ನಾಯಕ, ಉಪಾಧ್ಯಕ್ಷ ಆಕಾಶ ನಾಯಕ, ಶ್ರೀಶಾಳ ಪಾಲಕರಾದ ಶಿವಕುಮಾರ ನಾಯಕ, ಮಂಜುಳಾ ನಾಯಕ, ಇತರರಿದ್ದರು.