ಮತ್ತಿಘಟ್ಟದಲ್ಲಿ ಯಕ್ಷಗಾನ ಶಿಬಿರ ಸಂಪನ್ನ

SIRSI YAKSHAGANA
Published on

ಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿ, ಶಬರ ಸಂಸ್ಥೆ ಸೋಂದಾ ಜಂಟಿಯಾಗಿ ತಾಲೂಕಿನ ಮತ್ತಿಘಟ್ಟದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ತರಬೇತಿ ಮತ್ತು ಯಕ್ಷಗಾನ ಪ್ರದರ್ಶನ ಇತ್ತೀಚೆಗೆ ಸಂಪನ್ನಗೊಂಡಿತು.

ನಾಗರಾಜ ಜೋಶಿ ಸೋಂದಾ ನಿರ್ದೇಶನದಲ್ಲಿ ಕುಂಬಾಸುರ ಕಾಳಗ ಆಖ್ಯಾನ ಜನರ ಮನ ರಂಜಿಸಿತು. ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ಶ್ರೀನಿವಾಸ ಭಾಗವತ ಮತ್ತಿಘಟ್ಟ, ಶ್ರೀಪಾದ ಭಟ್ಟ ಮೂಡಗಾರ್, ವಿಘ್ನೕಶ್ವರ ಕೆಸರಕೊಪ್ಪ ಸಹಕರಿಸಿದರು. ವೇಷಭೂಷಣದ ಸಹಕಾರವನ್ನು ಸಿದ್ದಾಪುರದ ಎಂ.ಆರ್. ನಾಯ್ಕ ನೀಡಿದರು. 15 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಅಂಕಿತಾ ಹೆಗಡೆ, ಪ್ರಣಿತಾ ನಾಯ್ಕ, ಅನಿಷಾ ಮಹಾಲೆ, ಸ್ಮಿತಾ ನಾಯ್ಕ, ಸಿಂಚನ ಮರಾಠಿ, ಧನ್ಯಾ ಗೌಡ, ಅನನ್ಯ ಹೆಗಡೆ, ವಿಶಾಖ ಹೆಗಡೆ, ಸಿಂಧು ಮರಾಠಿ, ಸಾನ್ನಿಧ್ಯ ನಾಯ್ಕ, ಲಾವಣ್ಯ ಮರಾಠಿ, ವೈಷ್ಣವಿ ಭಾರದ್ವಾಜ್, ಶೌರಿ ಹೆಗಡೆ, ಗೌತಮ್ ಮರಾಠಿ, ಮನೋಹರ ಮರಾಠಿ ಅವರುಗಳು ವಿವಿಧ ಪಾತ್ರಗಳಲ್ಲಿ ಸೇರಿರುವ ಪ್ರೇಕ್ಷಕರನ್ನು ರಂಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net