ಯಕ್ಷಗಾನ ತಾಳಮದ್ದಳೆ ಕಲಾವಿದ ಸುಬ್ರಾಯ ಭಟ್‌ ಗಡಿಹೊಳೆ ನಿಧನ

Subray Bhat gadihole
Published on

ಶಿರಸಿ: ಯಕ್ಷಗಾನ ಗುರು, ತಾಳಮದ್ದಳೆ ಕಲಾವಿದ ತಾಲೂಕಿನ ಭೈರುಂಭೆ ಸಮೀಪದ ಗಡಿಗೆಹೊಳೆಯ ವಿದ್ವಾನ್ ಸುಬ್ರಾಹ ಭಟ್(80)ಭಾನುವಾರ ನಿಧನ ಹೊಂದಿದರು. ಮೃತರಿಗೆ ಪತ್ನಿ ಇಬ್ಬರು ಪುತ್ರಿಯರು ಇದ್ದಾರೆ.
ಸಂಸ್ಕೃತ ಅಧ್ಯಾಪಕರಾಗಿದ್ದ ಅವರು, ವೈದಿಕ ವೃತ್ತಿಯನ್ನೂ ಮಾಡುತ್ತಿದ್ದರು. ಶ್ರೀವಿದ್ಯಾ ಕಾಶ್ಯಪ ಪ್ರತಿಷ್ಠಾನ ಎಂಬ ಮಹಿಳಾ ಯಕ್ಷಗಾನ ಸಂಸ್ಥೆಯನ್ನು ಕಟ್ಟಿ , ಮಹಿಳೆಯರಿಗೆ ಯಕ್ಷಗಾನ ಹೇಳಿ ಕೊಟ್ಟಿದ್ದರು. ಅವರ ಶಿಷ್ಯಂದಿರು ದೇಶ, ವಿದೇಶಗಳಲ್ಲಿ ಯಕ್ಷಗಾನ ಪ್ರರ್ಶನ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net