

ಮಂಗಳೂರು : ಸತತ 30 ವರ್ಷಗಳಿಂದ ಕದ್ರಿ ಹವ್ಯಾಸಿ ಬಳಗವು ಶರತ್‌ಕುಮಾರ್ ಕದ್ರಿ ಅವರ ಸಂಚಾಲಕತ್ವದಲ್ಲಿ ಮಾಡಿರುವ ಸಾಧನೆ ಅನನ್ಯವಾಗಿದೆ. ಯಕ್ಷಗಾನ ಕಲೆ ಇಂದಿಗೂ ಶಾಶ್ವತವಾಗಿರುವುದಕ್ಕೆ ಇಂತಹ ಸಂಘಟನೆಗಳು ಹಾಗೂ ಸಂಘಟಕರು ನೀಡಿದ ಕೊಡುಗೆ ಕಾರಣ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಹವ್ಯಾಸಿ ಬಳಗ ಕದ್ರಿಯ ತ್ರಿಂಶತಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ವಾಸ್ತುತಜ್ಞ ರಾಜ್‌ಕುಮಾರ್ ಕುಲಶೇಖರ ಕಾರ್ಯಕ್ರಮ ಉದ್ಘಾಟಿಸಿದರು. ಮುಂಬೈಯ ಥಾಣೆ ಜಿಲ್ಲೆಯ ವಿಹಿಂಪ ಅಧ್ಯಕ್ಷ ಪೊಳ್ಯ ಉಮೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ಮನೋಜ್ ಕುಮಾರ್, ಕಟೀಲು ಮೇಳಗಳ ವ್ಯವಸ್ಥಾಪಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಸಾನಿಧ್ಯ ವಸತಿ ಶಾಲೆಯ ಆಡಳಿತಾಧಿಕಾರಿ ಡಾ. ವಸಂತ ಕುಮಾರ ಶೆಟ್ಟಿ, ರೇಖಿ ಮಾಸ್ಟರ್ ವಿಜಯ ಸುವರ್ಣ ಮಾಧುಕೋಡಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಕಾರ್ಪೋರೇಟರ್ ಮನೋಹರ ಶೆಟ್ಟಿ ಕದ್ರಿ., ನಿತಿನ್ ಅತ್ತಾವರ, ಕೃಷ್ಣ ಆಚಾರ್ಯ ಕದ್ರಿ, ಭುಜಬಲಿ ಧರ್ಮಸ್ಥಳ, ನಿರ್ಮಲಾ ಎಸ್. ಶೆಟ್ಟಿ ಭಾಗವಹಿಸಿದ್ದರು.
ಕೀರ್ತಿಶೇಷ ಕಲಾವಿದರ ಸಂಸ್ಮರಣೆಯನ್ನು ಹಿರಿಯ ಯಕ್ಷಗಾನ ಅರ್ಥಧಾರಿ ಸರ್ಪಂಗಳ ಈಶ್ವರ ಭಟ್ ನೆರವೇರಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು. ಕದ್ರಿ ಹವ್ಯಾಸಿ ಬಳಗದ ಸಂಚಾಲಕ ಶರತ್ ಕುಮಾರ್ ಕದ್ರಿ ಸ್ವಾಗತಿಸಿ, ಡಾ. ದಿನಕರ ಎಸ್. ಪಚ್ಚನಾಡಿ ವಂದಿಸಿದರು. ಸುನಿಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು.