ಯಕ್ಷದೇಗುಲ ಪ್ರಶಸ್ತಿಗೆ ಮೋಹನ್‌ದಾಸ್ ಶೆಣೈ ಆಯ್ಕೆ

yaksha
ಮೋಹನ್‌ದಾಸ್ ಶೆಣೈ
Published on

ಕೋಟ: ಬೆಂಗಳೂರಿನ ಯಕ್ಷದೇಗುಲ ತಂಡದ 2024ನೇ ಸಾಲಿನ ಯಕ್ಷದೇಗುಲ ಪ್ರಶಸ್ತಿ-2024ಕ್ಕೆ ಆರ‌್ಗೋಡು ಮೋಹನ್‌ದಾಸ್ ಶೆಣೈ ಆಯ್ಕೆಯಾಗಿದ್ದಾರೆ. ಅ.5ರಂದು ಬೆಂಗಳೂರಿನ ಗವಿಪುರಂ (ಚಾಮರಾಜಪೇಟೆ) ಉದಯಭಾನು ಕಲಾಸಂಘದ ಸಭಾಂಗಣದಲ್ಲಿ ನಡೆಯುವ ಯಕ್ಷದೇಗುಲದ ಯಕ್ಷಗಾನ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಯಕ್ಷದೇಗುಲ ನಿರ್ದೇಶಕ ಕೆ.ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net