

ಬೆಂಗಳೂರು: ಟೀಮ್ ಕದಳಿ ವತಿಯಿಂದ ರವೀಂದ್ರ ಕಲಾ ಕ್ಷೇತ್ರದಲ್ಲಿ ಜೂ.21ರಂದು ರಾತ್ರಿ 10ರಿಂದ "ಯಕ್ಷ ಸಿಂಧೂರ' ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ತೆಂಕು&ಬಡಗಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ, ಸುದರ್ಶನ ವಿಜಯ ಹಾಗೂ ರುಕ್ಮಿಣಿ ಕಲ್ಯಾಣ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ಕಲಾವಿದರಾದ ಕೊಳಗಿ ಕೇಶವ ಹೆಗಡೆ, ರಾಮಕೃಷ್ಣ ಹೆಗಡೆ ಹಿಲ್ಲೂರು, ವಿನಯ್ ಆರ್.ಶೆಟ್ಟಿ, ಶ್ರೇಯಾ ಆಚಾರ್ಯ ಅಲಂಕಾರು, ಸುರೇಶ ಶೆಟ್ಟಿ ಶಂಕರ ನಾರಾಯಣ, ಬಳ್ಕೂರು ಕೃಷ್ಣಯಾಜಿ, ಅಶೋಕ್ ಭಟ್ ಸಿದ್ಧಾಪುರ, ತೋಟಿಮನೆ ಗಣಪತಿ ಹೆಗಡೆ, ಸುಧೀರ್ ಉಪ್ಪೂರು, ಜಲವಳ್ಳಿ ವಿದ್ಯಾಧರ ರಾವ್, ಪೆಮುರ್ದೆ ಜಯಪ್ರಕಾಶ್ ಶೆಟ್ಟಿ, ವಿಶ್ವನಾಥ್ ಹೆನ್ನಾಬೈಲ್, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಮಾಹಿತಿಗೆ 9036963626, 9945668196 ಸಂಪರ್ಕಿಸಿ.