ಬ್ರಹ್ಮಾವರ ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಬೇತಿ ಉದ್ಘಾಟನೆ

Brahmavara_Board_scoll_Udgatana_1
Published on

ಉಡುಪಿ : ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಘುಪತಿ ಭಟ್ 16 ವರ್ಷದ ಹಿಂದೆ ಆರಂಭಿಸಿದ ಯಕ್ಷಶಿಕ್ಷಣ ಅಭಿಯಾನವು ಅತ್ಯಂತ ಮೌಲಿಕವಾಗಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದೆ. ಈ ಹಿನ್ನಲೆಯಲ್ಲಿ ಪ್ರಕೃತ ಟ್ರಸ್ಟ್‌ನ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.


ಶುಕ್ರವಾರ ಬ್ರಹ್ಮಾವರ ಸರ್ಕಾರಿ ಪ್ರೌಢಶಾಲೆ (ಬೋರ್ಡ್ ಹೈಸ್ಕೂಲ್) ಯಲ್ಲಿ ಈ ಬಾರಿಯ ಯಕ್ಷಶಿಕ್ಷಣ ತರಬೇತಿಯನ್ನು ಉದ್ಘಾಟಿಸಿ, ಮಾತನಾಡಿದರು.


ಟ್ರಸ್ಟ್‌ನ ವಿಶ್ವಸ್ಥ ಎಸ್.ವಿ. ಭಟ್, ಶಾಲೆ ನಿವೃತ್ತ ಉಪಪ್ರಾಂಶುಪಾಲ ಬಿ. ಟಿ. ನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಕೃಷ್ಣ ಹಾರಾಡಿ, ಪಿ. ಟಿ. ಎ. ಅಧ್ಯಕ್ಷ ಸದಾನಂದ ವಾರಂಬಳ್ಳಿ, ಸದಸ್ಯರಾದ ಭಾಸ್ಕರ ರೈ, ಸುಧೀರ್ ಕುಮಾರ್ ಶೆಟ್ಟಿ, ಯಕ್ಷ ಗುರು ನರಸಿಂಹ ತುಂಗ ಉಪಸ್ಥಿತರಿದ್ದರು.


ಶಾಲಾ ಪ್ರಭಾರ ಉಪಪ್ರಾಂಶುಪಾಲ ಜಗದೀಶ ಸ್ವಾಗತಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದ ಪೂರ್ವದಲ್ಲಿ ವಿದ್ಯಾರ್ಥಿಗಳಿಂದ ಪೂರ್ವರಂಗ ಪ್ರಸ್ತುತಿಗೊಂಡಿತ್ತು. ಶಾಲೆಯ 73 ವಿದ್ಯಾರ್ಥಿನಿಯರು ಹಾಗೂ 30 ವಿರ್ದ್ಯಾಥಿಗಳು ಯಕ್ಷಗಾನ ತರಬೇತಿಗೆ ಪಾಲ್ಗೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net