ಆದಿಉಡುಪಿ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಉದ್ಘಾಟನೆ

udp-11-Adi_udupi_high_school
Published on

ಉಡುಪಿ : ಆದಿಉಡುಪಿ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಉದ್ಘಾಟನೆ ಗುರುವಾರ ಶಾಲಾ ಸಭಾಭವನದಲ್ಲಿ ನೆರವೇರಿತು.

ಯಕ್ಷಶಿಕ್ಷಣ ಟ್ರಸ್ಟ್​ ಕಾರ್ಯದರ್ಶಿ ಮುರಲಿ ಕಡೆಕಾರ್​ ಮಾತನಾಡಿ, ಈ ಬಾರಿ ಎಪ್ಪತ್ತು ಪ್ರೌಢಶಾಲೆಗಳಲ್ಲಿ ಯಕ್ಷಗಾನ ಕಲಿಕೆ ಆರಂಭಗೊಂಡಿದ್ದು, ಇನ್ನಷ್ಟು ಶಾಲೆಗಳಿಂದ ಬೇಡಿಕೆ ಬರುತ್ತಿದೆ. ಗುರುಗಳ ಕೊರತೆಯಿಂದಾಗಿ ಕೋರಿಕೆ ಈಡೇರಿಸಲಾಗುತ್ತಿಲ್ಲ. ಇದು ಯಕ್ಷಶಿಕ್ಷಣದ ಬಗೆಗಿರುವ ಆಸಕ್ತಿಯ ದ್ಯೋತಕ ಎಂಬುದಾಗಿ ನುಡಿದರು.

ಮುಖ್ಯ ಶಿಕ್ಷಕ ರವೀಂದ್ರರು ಸ್ವಾಗತಿಸಿದರು. ಶಾಲಾ ಸಂಚಾಲಕ ಟಿ. ಕೆ. ಗಣೇಶ್​ ರಾವ್​, ಉಡುಪಿ ಮೆಸ್ಕಾಂ ಅಧಿಕಾರಿ ಎಸ್​. ಗಣರಾಜ ಭಟ್​, ಯಕ್ಷಗಾನ ಗುರು ಶಾಂತರಾಮಾ ಆಚಾರ್ಯ ಶುಭಾಶಂಸನೆಗೈದರು. ಶಿಕ್ಷಕರಾದ ಡೇವಿಡ್​ ಅಲ್ಬರ್ಟ್​, ಸುರೇಶ ನಾಯ್ಕ, ಅಶೋಕ್​ ಹಾಗೂ ಸುಧಾಕರ ಉಪಸ್ಥಿತರಿದ್ದರು. ಶಿಕ್ಷಕ ಉಮೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಆಸಕ್ತ 40 ವಿದ್ಯಾರ್ಥಿಗಳು ಯಕ್ಷಗಾನ ಕಲಿಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net