

ಮಂಗಳೂರು : ಯಕ್ಷಗಾನದಲ್ಲಿ ಮಕ್ಕಳು ಅಭಿನಯಿಸುವುದರಿಂದ ಪೌರಾಣಿಕ ಕಥಾ ಅನುಭವ, ನಾಟ್ಯ ಮತ್ತು ಮಾತುಗಾರಿಕೆಯ ಸೊಗಸನ್ನು ಪ್ರದರ್ಶಿಸಬಹುದು ಎಂದು ವೇದಮೂರ್ತಿ ಅನಂತ ಪದ್ಮನಾಭ ಉಪಾಧ್ಯಾಯ ಹೇಳಿದರು.
ಶ್ರೀರಾಮ ಕಲಾವೇದಿಕೆ ಕೈಕಂಬ ಇದರ ವತಿಯಿಂದ ನಡೆದ ಮಕ್ಕಳ ಸಪ್ತದಿನ ಯಕ್ಷೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು ‘ ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಬೆಳೆಸುತ್ತಿರುವ ಶ್ರೀ ರಾಮ ಕಲಾವೇದಿಕೆಯ
ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ಉಳಾಯಿಬೆಟ್ಟು ಮೊರಾರ್ಜಿ ವಸತಿ ಶಾಲಾ ಶಿಕ್ಷಕ ಜಯಕರ ಶೆಟ್ಟಿ ಮಾತನಾಡಿ ‘ ಮಕ್ಕಳ
ವ್ಯಕ್ತಿತ್ವ ವಿಕಸನವಾಗಲು ಹಾಗೂ ಪೌರಾಣಿಕ ಕಥಾ ಪ್ರಪಂಚದ ಅರಿವು ಮೂಡಲು ಯಕ್ಷಗಾನ ಅತ್ಯಂತ ಸಹಕಾರಿ ಎಂದರು.
ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು. ಶಾರದಾ ಪ.ಪೂ. ಕಾಲೇಜಿನ ಸಂಸ್ಕೃತ
ವಿಭಾಗದ ಮುಖ್ಯಸ್ಥ ರಮೇಶ ಆಚಾರ್ಯ ನಾರಳ ಅಧ್ಯಕ್ಷತೆ ವಹಿಸಿದ್ದರು.
ಶ್ರೀರಾಮ ಕಲಾವೇದಿಕೆಯ ಅಧ್ಯಕ್ಷ ಎಂ. ಹರಿರಾವ್, ಕಾರ್ಯದರ್ಶಿ ಪ್ರಸನ್ನ ರಾವ್ , ಸರೋಜಾ ರಾವ್ , ಗೀತಾ ರಾವ್
ಉಪಸ್ಥಿತರಿದ್ದರು. ಗಜಾನನ ಭಟ್ ಕಾರ್ಯಕ್ರಮ ನಿರೂಪಿಸಿದರು. ರಾಮಾಯಣ ಕಥಾನಕದ ಪ್ರಸಂಗಗಳು ಏಳು ದಿನಗಳಲ್ಲಿ
ಪ್ರದರ್ಶನಗೊಂಡವು. ಸಮಾರೋಪ ಸಮಾರಂಭದ ಅಂಗವಾಗಿ ಪಾದ ಪ್ರತೀಕ್ಷಾ ಮತ್ತು ರಾವಣವಧೆ ಯಕ್ಷಗಾನ ಪ್ರದರ್ಶನಗೊಂಡಿತು.