ಕರಾವಳಿಯಲ್ಲಿದೆ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಮನಸ್ಸು : ಯಕ್ಷ ಸಂಭ್ರಮದಲ್ಲಿ ಹರೀಶ್ ಪೂಂಜ ಅನಿಸಿಕೆ 10 ಸಾವಿರ ಜನರಿಂದ ಯಕ್ಷಗಾನ ವೀಕ್ಷಣೆ

New Project (1)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಯಕ್ಷಗಾನಕ್ಕೆ ಹೊಸ ಕಲ್ಪನೆ ಕೊಟ್ಟವರು ಪಟ್ಲ ಸತೀಶ್ ಶೆಟ್ಟಿ, ಅದಕ್ಕೆ ಶಶಿಯಾಗಿ ಬೆಳಕು ಕೊಟ್ಟವರು ಶಶಿಧರ್ ಶೆಟ್ಟಿ. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಮನಸ್ಸು ಕರಾವಳಿಯಲ್ಲಿದೆ. ಶಶಿಧರ್ ಶೆಟ್ಟಿ ಅವರಿಗೆ ಅವರ ತಾಯಿ ಕಾಶಿ ಶೆಟ್ಟಿ ಅವರ ಆಶೀರ್ವಾದವಿದೆ ಎಂದು ಹರೀಶ್ ಪೂಂಜ ಹೇಳಿದರು.

ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಷನ್ ಬೆಳ್ತಂಗಡಿ ಘಟಕ ವತಿಯಿಂದ ಗುರುವಾಯನಕೆರೆಯಲ್ಲಿ ನಡೆದ ಯಕ್ಷ ಸಂಭ್ರಮ-2024 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಟರಾಜ್ ಬಿ.ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ಸಂಸ್ಕೃತಿ ಸಂಸ್ಕಾರ ಉಳಿಸಿ, ಬೆಳೆಸುವ ಮನಸ್ಸುಗಳು ನಮಗೆ ಬೇಕು. ಅದು ಕರಾವಳಿಯಲ್ಲಿ ಜೀವಂತವಾಗಿದೆ ಎಂಬುದಕ್ಕೆ ಯಕ್ಷ ಸಂಭ್ರಮ ಸಾಕ್ಷಿ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಬೆಳ್ತಂಗಡಿ ಘಟಕ ಗೌರವಾಧ್ಯಕ್ಷ, ಬರೋಡಾ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿದರು.

ನಟಿ ಸಂಯುಕ್ತ ಹೊರನಾಡು, ಅಮೆರಿಕ ಉದ್ಯಮಿ ಮಂಜುನಾಥ್ ಶೆಟ್ಟಿ, ಪಟ್ಲ ದೆಹಲಿ ಘಟಕ ಅಧ್ಯಕ್ಷ ವಸಂತ್ ಶೆಟ್ಟಿ ಬೆಳ್ಳಾರೆ, ಕೇಂದ್ರ ಸಮಿತಿಯ ಪುರುಷೋತ್ತಮ ಅಡ್ಯಾರ, ಕೇಂದ್ರ ಸಮಿತಿ ಕೋಶಾಧಿಕಾರಿ ಸುದೇಶ್, ರವಿಚಂದ್ರ ಶೆಟ್ಟಿ, ಪಟ್ಲ ಮಹಾಬಲ ರೈ, ಮುನಿಯಾಲು ಉದಯ ಕುಮಾರ ಶೆಟ್ಟಿ, ಘಟಕದ ಕಾರ್ಯದರ್ಶಿ ಶಿತಿಕಂಠ ಭಟ್, ಕೋಶಾಧಿಕಾರಿ ಆದರ್ಶ್ ಜೈನ್, ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬೆಳ್ತಂಗಡಿ ಘಟಕ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಲ ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿದರು. ರವೀಂದ್ರ ಶೆಟ್ಟಿ ಬಳಂಜ ವಂದಿಸಿದರು.

ಯಕ್ಷಗಾನದಲ್ಲಿ 25 ವರ್ಷ ಪೂರೈಸಿದ ಯಕ್ಷದ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅವರನ್ನು ಸನ್ಮಾನಿಸಲಾಯಿತು. ಡಿ.14ರಂದು ಮೃತಪಟ್ಟ ಭಾಗವತ ಲೀಲಾವತಿ ಬೈಪಡಿತ್ತಾಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರಿಗೆ ಯಕ್ಷ ಸಂಭ್ರಮ ಪ್ರಶಸ್ತಿ ಪ್ರದಾನಿಸಲಾಯಿತು. ಗುರುವಾಯನಕೆರೆಯ ಹಿರಿಯ ವೈದ್ಯ ಡಾ.ವೇಣುಗೋಪಾಲ್ ಶರ್ಮ ಹಾಗೂ ಬೆಳ್ತಂಗಡಿ ಧನ್ವಂತರಿ ಆಯುರ್ವೇದ ಕ್ಲಿನಿಕ್ ಹಿರಿಯ ವೈದ್ಯ ಡಾ.ಕೆ.ಜಿ.ಪಣಿಕರ್‌ಗೆ ಗೌರವ ಸನ್ಮಾನ, ನಿಡ್ಲೆ ಅಗ್ರಿಲೀಫ್ ಪ್ರೈ.ಲಿ.ಸಂಸ್ಥಾಪಕ ಅವಿನಾಶ್ ರಾವ್, ಸಹಸ್ಥಾಪಕ ಅತಿಶಯ ಜೈನ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ದಿವಾಣ ಶಿವಶಂಕರ್ ಭಟ್ ಅವರನ್ನು ಗೌರವಿಸಲಾಯಿತು.

10,000ಕ್ಕೂ ಮಿಕ್ಕಿ ಯಕ್ಷ ಪ್ರೇಕ್ಷಕರ ಸಮಾಗಮ., 42 ಬಗೆಯ ಖಾದ್ಯ ವೈವಿಧ್ಯ,ಭವ್ಯ ಮೆರವಣಿಗೆ ನಡೆಯಿತು. 42 ಬಗೆಯ ಖಾದ್ಯ ಸ್ಮರಣಶಕ್ತಿಯಿಂದ ಹೆಸರಿಸಿದ ಸುಚಿತ್ರಾ ಕೊಯ್ಯೂರು, ಸಂದೀಪ್ ಶೆಟ್ಟಿ ನಾಳಗೆ ತಲಾ 4 ಗ್ರಾಂ. ಬಂಗಾರ ಉಡುಗೊರೆ, ಯಕ್ಷಗಾನ ವಿಮಾನಯಾನ ಲಕ್ಕಿ ಡ್ರಾದಲ್ಲಿ ಉಚಿತ ವಿಮಾನಯಾನ ಅವಕಾಶ ಪಡೆದವರಿಗೆ, ಲಕ್ಕಿ ಡ್ರಾದಲ್ಲಿ ಉಜಿರೆ ದಿ ಓಷಿಯನ್ ಪರ್ಲ್‌ನಲ್ಲಿ ಒಂದು ದಿನ ತಂಗಲು ಅವಕಾಶ ಪಡೆದ 2 ಕುಟುಂಬ, ಪ್ರಶ್ನೋತ್ತರದಲ್ಲಿ ಪ್ರೇಕ್ಷಕರಿಗೆ 24 ಬಹುಮಾನ ವಿತರಣೆ ನಡೆಯಿತು.

ಯಕ್ಷಗಾನವನ್ನು ಈ ರೀತಿಯೂ ನಡೆಸಬಹುದು ಎಂಬ ಕಲ್ಪನೆಗೆ ಬೆಳ್ತಂಗಡಿ ಸಾಕ್ಷಿಯಾಗಿದೆ. ಬೆಳ್ತಂಗಡಿಯ ಜನತೆ ಹಿಂದೆಂದೂ ಕಂಡಿರದಂತಹ ಯಕ್ಷಲೋಕಕ್ಕೆ ಕರೆದೊಯ್ದಿದ್ದಾರೆ. ಜಗತ್ತಿನಲ್ಲಿ ಕಲೆ ಹಾಗೂ ಚಲನಚಿತ್ರವನ್ನು ಇಂದು ತುಳುವರು ಆಳುತ್ತಿದ್ದಾರೆ ಎಂಬುದು ಸಂತಸದ ವಿಚಾರ. ಯಕ್ಷಗಾನ ಕಲೆಯ ಮೂಲಕ ಎಲ್ಲ ಜಾತಿ, ಧರ್ಮವನ್ನು ಒಗ್ಗೂಡಿಸುವ ಕೆಲಸವಾಗಿದೆ. ಹರೀಶ್ ಪೂಂಜ, ಶಾಸಕ 25 ವರ್ಷದ ವೃತ್ತಿ ಜೀವನದ ಇತಿಹಾಸದಲ್ಲಿ ಯಕ್ಷಗಾನಕ್ಕಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಸಂಯೋಜಿಸಿರುವುದು ಇದೇ ಪ್ರಥಮ. ಕರ್ನಾಟಕದಾದ್ಯಂತ ನಮ್ಮ ಫೌಂಡೇಷನ್‌ನಿಂದ 9 ಸಾವಿರ ವಿದ್ಯಾರ್ಥಿಗಳು ಯಕ್ಷಗಾನ ಕಲಿಯುತ್ತಿದ್ದಾರೆ. ಪಟ್ಲ ಫೌಂಡೇಷನ್‌ನ ಬೆನ್ನೆಲುಬು ಶಶಿಧರ್ ಶೆಟ್ಟಿ ಬರೋಡಾ. ಸತೀಶ್ ಶೆಟ್ಟಿ ಪಟ್ಲ, ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ https://www.vijayavani.net/suicide-case-6 https://www.vijayavani.net/chaitanya-shri-award-to-dr-anuradha

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net