ಕಲಾ ಸಂಘಟನೆ ಪರಿಶ್ರಮ ಬೇಡುವ ಕಾರ್ಯ : ಬಿ.ಭುಜಬಲಿ ಧರ್ಮಸ್ಥಳ ಚಿಂತನೆ

New Project (45)
Published on

ಮೂಡುಬಿದಿರೆ: ಕಲಾ ಸಂಘಟನೆ ಸುಲಭದ ಕಾರ್ಯವಲ್ಲ. ಅದು ಶ್ರದ್ಧೆ, ಪರಿಶ್ರಮ ಬೇಡುವ ಕೈಂಕರ್ಯ. ಯಕ್ಷ ಮೇನಕಾದವರು ಆಟ, ಕೂಟಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವುದು ಶ್ಲಾಘನೀಯ. ದಿನೇಶ ರೈ ಕಥೆಗೆ ಪೂರಕವಾಗಿ ಯಾವುದೋ ಸಂದೇಶ ನೀಡುವ ಉತ್ಸಾಹ ಹೊಂದಿರುತ್ತಾರೆಯೇ ಹೊರತು, ಇತರ ಉದ್ದೇಶದಿಂದಲ್ಲ ಎಂದು ಯಕ್ಷ ಸಂಘಟಕ ಬಿ.ಭುಜಬಲಿ ಧರ್ಮಸ್ಥಳ ಅಭಿಪ್ರಾಯಪಟ್ಟರು.

ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಕಲಾಮಂದಿರದಲ್ಲಿ ಭಾನುವಾರ ಯಕ್ಷ ಮೇನಕಾ ಮೂಡುಬಿದಿರೆಯ 17ನೇ ವರ್ಷದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಭಾಗವತ ಪ್ರಫುಲ್ಲಚಂದ್ರ ನೆಲ್ಯಾಡಿ ಅವರನ್ನು ಸನ್ಮಾನಿಸಲಾಯಿತು. ಹಾಸ್ಯಗಾರ ಕಡಬ ದಿನೇಶ ರೈ ಅವರಿಗೆ ಯಕ್ಷ ಪ್ರೋತ್ಸಾಹ ನೀಡಿ ಗೌರವಿಸಲಾಯಿತು. ಪ್ರಧಾನ ಪ್ರೋತ್ಸಾಹಕ, ರಂಗಸ್ಥಳ ಮಂಗಳೂರು ಅಧ್ಯಕ್ಷ ಎಸ್.ಎಲ್.ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಎ.ಎಸ್.ಭಟ್ ಮಂಗಳೂರು, ಯಕ್ಷ ಚೈತನ್ಯದ ಅಧ್ಯಕ್ಷ ಕೃಷ್ಣಮೂರ್ತಿ ಕಟೀಲು, ಭಾಗವತ ಮಾಧವ ಆಚಾರ್ಯ ಸಂಪಿಗೆ, ಪ್ರಗತಿಪರ ಕೃಷಿಕ ರಮೇಶ್ ಭಟ್ ಕೇಂಜೆ, ಪೊನ್ನೆಚಾರಿ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಅಶೋಕ ಕಾಮತ್ ಮುಖ್ಯ ಅತಿಥಿಗಳಾಗಿದ್ದರು.

ಯಕ್ಷ ಮೇನಕಾ ಅಧ್ಯಕ್ಷ ಸದಾಶಿವ ರಾವ್ ನೆಲ್ಲಿಮಾರು ಸ್ವಾಗತಿಸಿ ಪ್ರಸ್ತಾವನೆಗೈದರು. ಅನಂತ ನೆಲ್ಲಿಮಾರು, ನಾಗರಾಜ ಶರ್ಮ ಸನ್ಮಾನ ಪತ್ರ ವಾಚಿಸಿದರು. ಶಿವದತ್ತ ಭಟ್ ನಿರೂಪಿಸಿದರು. ಸುಬ್ರಹ್ಮಣ್ಯ ಶೆಟ್ಟಿ ವಂದಿಸಿದರು. ಬಳಿಕ ಯಕ್ಷಗಾನ ತಾಳಮದ್ದಳೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net