

ಕೊಕ್ಕಡ: ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಮಕ್ಕಳಿಗೆ ಯಕ್ಷಗಾನ ಕಲಿಸುವ ಪಟ್ಲ ಫೌಂಡೇಶನ್‌ನ ಶ್ರಮ ಶ್ಲಾಫನೀಯ ಎಂದು ಕಲಾವಿದ ನಿರಂಜನ್ ಜೈನ್ ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್‌ನಿಂದ ಪಟ್ರಮೆಯ ಅನಾರು ಸರ್ಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಬುಧವಾರ ಯಕ್ಷಗಾನ ನಾಟ್ಯ ತರಗತಿ ಉದ್ಘಾಟಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಧನಂಜಯ ಗೌಡ ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ ಟ್ರಸ್ಟ್ ಬೆಳ್ತಂಗಡಿ ಫಟಕದ ಪದಾಧಿಕಾರಿ ಚಂದ್ರಶೇಖರ ಗೌಡ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಶ್ಯಾಮರಾಜ್, ನಾಟ್ಯಗುರು ಅರುಣ್ ಕುಮಾರ್, ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಮೊದಲಾದವರಿದ್ದರು. ಸಹಶಿಕ್ಷಕ ಪ್ರಕಾಶ್ ಸ್ವಾಗತಿಸಿದರು. ಸಹಶಿಕ್ಷಕಿ ಅಶ್ವಿನಿ ನಿರೂಪಿಸಿದರು. ಸಹಶಿಕ್ಷಕ ಜಯಂತ್ ವಂದಿಸಿದರು.