ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯುರೋಪ್ ಘಟಕ ಉದ್ಘಾಟನೆ

mng-7oct-yakshadruva
Published on


ಮಂಗಳೂರು : ಜರ್ಮನಿಯ ಮ್ಯೂನಿಕ್ ನಗರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಯುರೋಪ್ ಘಟಕ ಉದ್ಘಾಟನೆಗೊಂಡಿತು.
ಭಾರತೀಯ ರಾಯಭಾರ ಕಚೇರಿಯ ಸಾಂಸ್ಕೃತಿಕ ಅಧಿಕಾರಿ ರಾಜೀವ್ ಚಿತ್ಕಾರ, ಮ್ಯೂನಿಕ್‌ನ ಎಂಎಲ್‌ಯು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ರಾಬರ್ಟ್ ಜೈಡನ್ಬೊಸ್,ಸನಾತನ ಅಕಾಡಮಿಯ ಅನೂಷಾ ಶಾಸ್ತ್ರಿ , ಮ್ಯೂನಿಕ್ ಸಿರಿಗನ್ನಡ ಕೂಟದ ಅಧ್ಯಕ್ಷ
ಶ್ರೀಧರ ಲಕ್ಷ್ಮಾಪುರ , ಫ್ರಾಂಕ್ಫರ್ಟ್ ರೈನ್‌ಮೈನ್ ಕನ್ನಡ ಸಂಘದ ಅಧ್ಯಕ್ಷ ವೇದಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕದ ಅಧ್ಯಕ್ಷ ನರೇಂದ್ರ ಶೆಣೈ , ಕಾರ್ಯದರ್ಶಿ ಹಾಗೂ ಜರ್ಮನಿಯ ಯಕ್ಷಗುರು ಅಜಿತ್ ಪ್ರಭು ಉಪಸ್ಥಿತರಿದ್ದರು.
ಕಳೆದ ಒಂದು ವರ್ಷದಿಂದ ಜರ್ಮನಿಯ ವಿವಿಧ ನಗರಗಳಲ್ಲಿ ಯಕ್ಷಗಾನ ಕಲಿಯುತ್ತಿದ್ದ ವಿದ್ಯಾರ್ಥಿಗಳು
ಭಾಗವಹಿಸಿದ್ದರು. ಯಕ್ಷಗಾನ ವಿದ್ಯಾರ್ಥಿಗಳಿಂದ ಮಾಯಾಮೃಗ ಯಕ್ಷಗಾನ ರೂಪಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net