ಯಜ್ಞೋಪವೀತ ಧಾರಣೆಗೆ ಉಂಟು ವಿಶೇಷ ಮಹತ್ವ

30sgrp2
ಸಾಗರದ ಶ್ರೀ ರಾಘವೇಶ್ವರ ಭವನದಲ್ಲಿ ನಗರ ಹವ್ಯಕ ಪೂರ್ವ ಮತ್ತು ಪಶ್ಚಿಮ ವಲಯ ಧರ್ಮವಿಭಾಗದಿಂದ ಉಪಾಕರ್ಮ ಕಾರ್ಯಕ್ರಮದಲ್ಲಿ ನೆರೆದಿದ್ದ ಜನ.
Published on

ಸಾಗರ: ಯಜ್ಞೋಪವೀತ ಧಾರಣೆಗೆ ತನ್ನದೇ ಆದ ಮಹತ್ವವಿದೆ. ಇದು ದಾರ ಮಾತ್ರವಲ್ಲ. ಇದು ಯಜ್ಞಸೂತ್ರ, ಸತ್ಕರ್ಮಗಳ ಅನುಸಂಧಾನಕ್ಕೆ ಪ್ರೇರಣಾದಾಯಕವಾಗುವ ಮೂಲಕ ಜೀವನ ದರ್ಶನ ತಿಳಿಯುವ ಜ್ಞಾನದ ಮೂಲ ಎಂದು ವಿದ್ವಾನ್ ಗಜಾನನ ಭಟ್ ರೇವಣಕಟ್ಟಾ ಹೇಳಿದರು.
ನಗರದ ಶ್ರೀ ರಾಘವೇಶ್ವರ ಭವನದಲ್ಲಿ ಸಾಗರ ನಗರ ಹವ್ಯಕ ಪೂರ್ವ ಮತ್ತು ಪಶ್ಚಿಮ ವಲಯ ಧರ್ಮ ವಿಭಾಗದಿಂದ ಬುಧವಾರ ನೂಲು ಹುಣ್ಣಿಮೆ ಪ್ರಯುಕ್ತ ಏರ್ಪಡಿಸಿದ್ದ ಉಪಾಕರ್ಮದ ಕುರಿತು ಮಾತನಾಡಿದರು.
ನಮ್ಮ ಅಂತರAಗದಲ್ಲಿರುವ ವಿಕೃತ ಗುಣಗಳನ್ನು ದಮನಗೊಳಿಸಿ ನಮ್ಮೊಳಗೆ ಆತ್ಮಗುಣಗಳನ್ನು ಬೆಳೆಸುವ ಉದ್ದೇಶದಿಂದ ನಮ್ಮ ಸನಾತನರು ಕಂಡುಕೊAಡ ಸತ್ಯದ ಬೆಳಕು ಯಜ್ಞೋಪವೀತದಲ್ಲಿದೆ. ಅದನ್ನು ಧರಿಸಿ ವೇದದ ಅರ್ಥವನ್ನು ಅರಿತು ಜೀವನ ಅನುಸರಿಸಿದರೆ ಮಾತ್ರ ಅದರ ಫಲ ಕಾಣಲು ಸಾಧ್ಯ. ವೇದದ ಶಬ್ದ ಮಾತ್ರ ಗ್ರಹಿಸುವುದಲ್ಲ, ಅದರ ಅರ್ಥವನ್ನೂ ಅರಿಯಬೇಕು. ಅದೂ ಒಂದು ವಿಜ್ಞಾನ ಎಂದರು.
ರವೀಶ ಶಾಸ್ತಿç ಮತ್ತು ರಾಜೇಂದ್ರಪ್ರಸಾದ್ ಭಟ್ ಕಾರ್ಯಕ್ರಮ ನಡೆಸಿಕೊಟ್ಟರು. ಗಣಪತಿ ಬೇದೂರು, ಸದಾಶಿವ ರಾಜಶ್ರೀ, ಕೆ.ಗೋಪಾಲ, ವಿ.ಜಿ.ಹೆಗಡೆ, ಶ್ರೀಧರ ಹೆಗಡೆ, ಬಿ.ಎಂ.ಲಕ್ಷಿ÷್ಮÃನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net