

ಯಲ್ಲಾಪುರ: ತಾಲೂಕಿನ ಕೋಸಗುಳಿ ಮೂಲದ ಆಚಾರ್ಯ ಪೊ›. ಯಜ್ಞೇಶ್ವರ ಶಾಸ್ತ್ರಿ ಅವರನ್ನು ಮಧ್ಯಪ್ರದೇಶ ಸರ್ಕಾರವು ಮುಂದಿನ ಮೂರು ವರ್ಷಗಳ ಅವಧಿಗೆ ಸಾಂಚಿ ಯುನಿವರ್ಸಿಟಿ ಆಫ್ ಬುದ್ಧಿಸ್ಟ್, ಇಂಡಿಕ್ ಸ್ಟಡೀಸ್ದ ಕುಲಾಧಿಪತಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರು, ಶಿಕ್ಷಣ ತಜ್ಞರೂ ಆಗಿರುವ ಪೊ›. ಯಜ್ಞೇಶ್ವರ ಅವರು, ಈ ಹಿಂದೆ ಇದೇ ವಿವಿ ಕುಲಪತಿಗಳಾಗಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಧ್ಯಪ್ರದೇಶ ಸರ್ಕಾರದ ಸಂಸ್ಕೃತಿ ಸಚಿವಾಲಯದ ಆಚಾರ್ಯ ಶಂಕರ ಸಾಂಸ್ಕೃತಿಕ ಏಕ್ತಾ ನ್ಯಾಸಸ್ ಅಡ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪೊ›. ಶಾಸ್ತ್ರಿ ಅವರು ಭಾರತೀಯ ತತ್ವಶಾಸ್ತ್ರ, ವಿಶೇಷವಾಗಿ ಹಿಂದು, ಬೌದ್ಧ ಮತ್ತು ಜೈನ ಫಿಲಾಸಪಿಗಳ ವಿದ್ವಾಂಸರಾಗಿ ಬಹುಶ್ರುತರು. ಸಂಸ್ಕೃತ ಮತ್ತು ಭಾರತೀಯ ಧರ್ಮ ವಿಷಯಗಳಿಗೆ ಸಂಬಂಧಿಸಿ ಸಂಶೋಧನೆಗಳು ಮತ್ತು ಉಪನ್ಯಾಸಕರಾಗಿ ಖ್ಯಾತರಾಗಿದ್ದಾರೆ.
ಗುಜರಾತ್ ವಿವಿಯ ತತ್ವಶಾಸ್ತ್ರ ವಿಭಾಗದಲ್ಲಿ ಸಹಪ್ರಾಧ್ಯಾಪಕ, ಪೊ›ಫೆಸರ್, ಅಧ್ಯಕ್ಷರೂ ಆಗಿ 40 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ಐಸಿಸಿಆರ್, ಐಸಿಪಿಆರ್ಗಳ ನ್ಯಾಶನಲ್ ಫೆಲೋ ಹಾಗೂ ನಾಮನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುಜರಾತಿನ ಜಾಗತಿಕ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.