

ನಗರದ ಶ್ರೀ ಯಾಜ್ಞವಲ್ಕ್ಯ ಸೇವಾ ಸಂಘದ ವತಿಯಿಂದ ಇಲ್ಲಿನ ಮದಿಹಾಳದ ಶ್ರೀ ಚಿದಂಬರ ಸೇವಾ ಸಮಿತಿಯಲ್ಲಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳ ಜಯಂತಿಯನ್ನು ಜೂ. ೧೫, ೧೬ರಂದು ಏರ್ಪಡಿಸಲಾಗಿದೆ.
ಜೂ. ೧೫ರಂದು ೯ ಗಂಟೆಗೆ ಚಿದಂಬರ ಸ್ವಾಮಿಗೆ ರುದ್ರಾಭಿಷೇಕ, ಬೆಳಗ್ಗೆ ೧೧.೩೦ಕ್ಕೆ ಡಾ. ಶ್ರೀಧರ ಕುಲಕರ್ಣಿ ಹಾಗೂ ಶ್ರುತಿ ಕುಲಕರ್ಣಿ ಅವರಿಂದ ಸಂಗೀತ ಸೇವೆ, ಮಧ್ಯಾಹ್ನ ೧೨.೩೦ಕ್ಕೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾನ್ವಿತ ಶುಕ್ಲ ಯಜುರ್ವೇದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ.
ಜೂ. ೧೬ರಂದು ಬೆಳಗ್ಗೆ ೮ ಗಂಟೆಗೆ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳಿಗೆ ವಿಶೇಷ ಪೂಜೆ, ಅಷ್ಟೋತ್ತರ, ಅಲಂಕಾರ ಹಾಗೂ ವಿದ್ವಾನ್ ಡಿ. ಸತ್ಯನಾರಾಯಣಾಚಾರ್ಯ ಅವರಿಂದ ಗುರುಗಳ ಕಥಾ ಶ್ರವಣ, ಬೆಳಗ್ಗೆ ೯ ಗಂಟೆಗೆ ಶ್ರೀ ಚಿದಂಬರ ಸ್ವಾಮಿಗೆ ರುದ್ರಾಭಿಷೇಕ, ಬೆಳಗ್ಗೆ ೧೦.೧೫ಕ್ಕೆ ತೊಟ್ಟಿಲೋತ್ಸವ, ಬೆಳಗ್ಗೆ ೧೦.೩೦ಕ್ಕೆ ಸಂಗೀತ ಕಾರ್ಯಕ್ರಮ, ಬೆಳಗ್ಗೆ ೧೧.೩೦ಕ್ಕೆ ಸಿ.ಆರ್. ಜೋಶಿ ಅವರಿಂದ ಯಾಜ್ಞವಲ್ಕ್ಯ ಮಹರ್ಷಿಗಳ ಕುರಿತು ಪ್ರವಚನ, ಮಧ್ಯಾಹ್ನ ೧೨.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಕ್ಷೇತ್ರ ಆನಂದವನದ ಶ್ರೀ ವಿಶ್ವನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅನುರಾಧಾ ಕುಲಕರ್ಣಿ, ಎಲ್.ಸಿ. ಕುಲಕರ್ಣಿ ಅತಿಥಿಗಳಾಗಿ ಆಗಮಿಸುವರು. ಪ್ರಕಾಶ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.