ಜಗತ್ತಿಗೆ ಯಾಜ್ಞವಲ್ಕ್ಯರ ಕೊಡುಗೆ ಅಪಾರ,  ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ ಅಭಿಮತ

IMG_20250607_210026_708.jpg
Published on

ಹುಬ್ಬಳ್ಳಿ: ಜಗತ್ತಿಗೆ ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ್ಯರ ಕೊಡುಗೆ ಅಪಾರವಾಗಿದೆ. ಅವರು ರಚಿಸಿದ ಯಾಜ್ಞವಲ್ಕ್ಯ ಸ್ಮೃತಿಯು ಜೀವನ ಪಾಠ ಕಲಿಸಿಕೊಡುವಂತಹದು ಎಂದು ವಿಶ್ವನಾಥ ಚಕ್ರವರ್ತಿ ಸ್ವಾಮಿಗಳು ಹೇಳಿದರು.

ನಗರದ ಶ್ರೀ ಮಹರ್ಷಿ ಶ್ರೀಮದ್ ಯೋಗೀಶ್ವರ ಯಾಜ್ಞವಲ್ಕ್ಯ ಟ್ರಸ್ಟ್ ವತಿಯಿಂದ ವಸಂತನಗರದ ಯಂತ್ರೋದ್ಧಾರಕ ಪ್ರಾಣದೇವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಯಾಜ್ಞವಲ್ಕ್ಯ ಮಹರ್ಷಿಗಳ ಜಯಂತ್ಯುತ್ಸವದಲ್ಲಿ ಪುಸ್ತಕ ಬಿಡುಗಡೆ, ಟ್ರಸ್ಟ್ ಲೋಗೋ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗಾಯತ್ರಿ ಮಂತ್ರದ ಮಹತ್ವ ಹಾಗೂ ನಿತ್ಯ ಜೀವನದಲ್ಲಿ ಜಪದ ಫಲದ ಕುರಿತಾಗಿ ಸವಿಸ್ತಾರವಾಗಿ ಪ್ರವಚನ ನೀಡಿದರು.

ಸುಪ್ರಭಾತ ಸೇವೆ, ಕಾಕಡಾರತಿ, ಗುರುಗಳ ಸ್ಥಾಪನೆ, ಸಾಮೂಹಿಕ ಉಚಿತ ಉಪನಯನ, ಭಕ್ತರಿಂದ ಯಾಜ್ಞವಲ್ಕ್ಯರ ಅಷ್ಟೋತ್ತರ ಹಾಗೂ ರುದ್ರಪಠಣ, ಸುಮಂಗಲೆಯರಿಂದ ಕುಂಕುಮಾರ್ಚನೆ, ಗುರುಗಳ ತೊಟ್ಟಿಲೋತ್ಸವ ಮುಂತಾದ ಕಾರ್ಯಕ್ರಮಗಳು ನೆರವೇರಿದವು.

ಚಂದ್ರಲಾಂಬಾ ದೇವಿಯ ಮಹಾತ್ಮೆ ಮತ್ತು ಭಜನ್ ಸಂಗ್ರಹ ಮಾಲಾ ಪುಸ್ತಕ ಬಿಡುಗಡೆ ಮಾಡಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಅನನ್ಯ ಸಿ.ಎ, ಭಾಗ್ಯಲಕ್ಷ್ಮಿ ಕುಲಕರ್ಣಿ, ಸನಂತ ಕಾಸನೀಸ್, ಪ್ರತಿಕ್ಷಾ ಕೋಳಿವಾಡ, ಅದಿತಿ ಕುಲಕರ್ಣಿ, ವಿಜಯ ಜೋಶಿ ಅವರನ್ನು ಗೌರವಿಸಲಾಯಿತು.

ಕೆ.ಎಸ್. ಶಾಂತಗಿರಿ, ದತ್ತಮೂರ್ತಿ ಕುಲಕರ್ಣಿ, ಗೋವಿಂದ ಕುಲಕರ್ಣಿ, ಲಕ್ಷ್ಮಣ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ವೇದಮೂರ್ತಿ ವೆಂಕಟೇಶ ಜೋಶಿ (ಬಳೂತಿ), ಉಪಾಧ್ಯಕ್ಷ ಭೀಮಾಜಿ ಕುಲಕರ್ಣಿ, ಕಾರ್ಯದರ್ಶಿ ಮಕರಂದ ಜೋಶಿ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕಾರಿ ಮಂಡಳಿ ಸದಸ್ಯ ಅಕ್ಷಯಕುಮಾರ ಜೋಶಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net