ಯದುವೀರ್ ಅವರ ಸಂಸದರ ಕಚೇರಿ ಉದ್ಘಾಟನೆ

5
Published on

ಮೈಸೂರು: ಸಾರ್ವಜನಿಕ ಸೇವೆಗಾಗಿ ಕಾಡಾ ಕಚೇರಿಯಲ್ಲಿ ಆರಂಭಗೊಂಡ ಸಂಸದರ ನೂತನ ಕಚೇರಿ ಉದ್ಘಾಟನೆ ಸಮಯದಲ್ಲಿ ಹಲವರು ಆಗಮಿಸಿ ಶುಭ ಕೋರಿದರು.
ಬುಧವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಹೋಮ, ಧಾರ್ಮಿಕ ಪೂಜಾ ಕಾರ್ಯ ನೆರವೇರಿಸಲಾಯಿತು. ನಂತರ ಮೂರು ಗಂಟೆಗೆ ಹಿರಿಯ ಮುಖಂಡರೊಂದಿಗೆ ಸಂಸದ ಯದುವೀರ ಅವರು ಟೇಪ್ ಕತ್ತರಿಸಿ ಉದ್ಘಾಟಿಸಿದರು. ಬಳಿಕ ನಂತರ ಚಾಮುಂಡೇಶ್ವರಿ, ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಚಿವರಾದ ಎಸ್.ಎ.ರಾಮದಾಸ್, ಸಾ.ರಾ.ಮಹೇಶ್, ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಸಮಿತಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಮಾಜಿ ಮೇಯರ್ ಎಸ್.ಸತೀಶ, ಸ್ವಾಮಿ, ಶಿವಕುಮಾರ, ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಸತೀಶ, ಬಿ.ವಿ.ಮಂಜುನಾಥ್, ಪ್ರಶಾಂತ್ ಗೌಡ, ಸೌಮಾ ಉಮೇಶ್, ಪ್ರಮೀಳಾ ಭರತ್, ಆರ್.ರವೀಂದ್ರ, ಜಯರಾಮ್, ಜಗದೀಶ, ವೇದಾವತಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಹೇಮಾ ನಂದೀಶ್, ವೀರಶೈವ ಮುಖಂಡ ಎಸ್.ವಿ.ನಂಜುಂಡಪ್ಪ, ಬಿಜೆಪಿ ಮುಖಂಡ ನಾಗರಾಜ್ ಮಲ್ಲಾಡಿ, ವಿ.ಸೋಮಸುಂದರ್ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net