ಸ್ವಾಮೀಜಿ, ಸಾಹಿತಿ ಭೇಟಿ ಮಾಡಿದ ಯದುವೀರ

mysore
Published on

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಕ್ರವಾರ ಸ್ವಾಮೀಜಿಗಳು, ಸಾಹಿತಿ ಮನೆಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು.


ಮೊದಲಿಗೆ ಹೊಸಮಠಕ್ಕೆ ಭೇಟಿ ನೀಡಿದ ಯದುವೀರ ಅವರನ್ನು ಶ್ರೀ ಚಿದಾನಂದ ಸ್ವಾಮೀಜಿ ಶುಭಹಾರೈಸಿದರು. ಬಳಿಕ ಮೈಸೂರಿನ ಆದಿಚುಂಚನಗಿರಿ ಶಾಖಾ ಮಠಕ್ಕೆ ತೆರಳಿದರು. ಶ್ರೀ ಸೋಮನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅವರಿಗೆ ಶಾಲುಹೊದಿಸಿ, ಹಾರ ಹಾಕಿ ಸನ್ಮಾನಿಸಿ ಶುಭ ಹಾರೈಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶ್ರೀಗಳನ್ನು ಭೇಟಿ ಮಾಡಿ ಉಭಯ ಕುಶಲೋಪರಿಯಾಗಿ ಮಾತುಕತೆ ನಡೆಸಿದರು.

ಇವರಿಗೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಾಥ್ ನೀಡಿದರು. ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಸಾಹಿತಿ ಎಸ್.ಎಲ್.ಭೈರಪ್ಪ ಅವರ ನಿವಾಸಕ್ಕೆ ತೆರಳಿದರು. ಭೈರಪ್ಪನವರಿಗೆ ಹಾರ ಹಾಕಿ, ಶಾಲು ಹೊದಿಸಿ ಯದುವೀರ ಸನ್ಮಾನಿಸಿದರು.

ಕಾಫಿ ಕುಡಿದ ಯದುವೀರ

ಚುನಾವಣಾ ಪ್ರಚಾರದ ನಡುವೆ ಕಾರ್ಯಕರ್ತರೊಂದಿಗೆ ಕುಳಿತು ಬಿಜೆಪಿ ಅಭ್ಯರ್ಥಿ ಯದುವೀರ ಕಾಫಿ ಸೇವಿಸಿದರು.

ಕುವೆಂಪುನಗರದಲ್ಲಿ ಸಾಗುವಾಗ ಮಾರ್ಗಮಧ್ಯೆ ಹೋಟೆಲ್‌ಗೆ ತೆರಳಿ ಕಾಫಿ ಕುಡಿದರು. ಈ ಸಂದರ್ಭದಲ್ಲೇ ಚುನಾವಣಾ ಪ್ರಚಾರದ ಕುರಿತು ಚರ್ಚೆ ನಡೆಸಿದರು. ಪ್ರಸಕ್ತ ವಿದ್ಯಮಾನಗಳ ಕುರಿತು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net