

ಮೈಸೂರು: ಅರಮನೆ ಆವರಣದಲ್ಲಿರುವ ತ್ರಿಣೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ದೇವರ ದರ್ಶನ ಪಡೆದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೈಸೂರು ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ 2ನೇ ಮಗನಿಗೆ ‘ಯುಗದಕ್ಷ’ ಎಂದು ನಾಮಕರಣ ಮಾಡಿರುವ ವಿಚಾರ ತಿಳಿಸಿದರು.
ಇತ್ತೀಚೆಗೆ 2ನೇ ಮಗನ ನಾಮಕರಣ ಸಮಾರಂಭವನ್ನು ಆಯೋಜಿಸಲಾಗಿತ್ತು. ‘ತ್ರಿಣೇಶ್ವರನ ಆಶೀರ್ವಾದದಿಂದ ಎರಡನೇ ಮಗುವಿಗೆ ನಾಮಕರಣ ಮಾಡಲಾಗಿದೆ. ಮಗುವಿಗೆ ಯುಗದಕ್ಷ ಎಂದು ನಾಮಕರಣ ಮಾಡಿದ್ದೇವೆ. ಎಲ್ಲರ ಆಶೀರ್ವಾದ ಮಗುವಿನ ಮೇಲೆ ಇರಲಿ’ ಎಂದರು.