

ಮೈಸೂರು: ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಂಚೆ ಮತದಲ್ಲೂ ಹೆಚ್ಚಿನ ಮತಗಳನ್ನು ಪಡೆಯಲು ಯಶಸ್ವಿಯಾಸಿದರು.
ಒಟ್ಟು 7,581 ಮತದಾರರು ಅಂಚೆ ಮತದಾನ, 836 ಸೈನಿಕರು ವಿದ್ಯುನ್ಮಾನ ಮಾಧ್ಯಮದ ಮೂಲಕ ಅಂಚೆಮತ (ಇಟಿಪಿಬಿಎಸ್) ಚಲಾವಣೆ ಮಾಡಿದ್ದರು. ಈ ಪೈಕಿ 474 ಅಂಚೆ ಮತ, 131 ಇಟಿಪಿಬಿಎಸ್ ಮತ ಸೇರಿದಂತೆ ಒಟ್ಟು 605 ಮತಗಳು ತಿರಸ್ಕೃತಗೊಂಡಿದೆ.
ಬಿಜೆಪಿಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 4,598 (ಅಂಚೆ ಮತ), 514 (ಇಟಿಪಿಬಿಎಸ್) ಸೇರಿದಂತೆ ಒಟ್ಟು 5,112, ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ 2,348 (ಅಂಚೆ ಮತ), 154 (ಇಟಿಪಿಬಿಎಸ್) ಸೇರಿದಂತೆ ಒಟ್ಟು 2,502 ಮತಗಳನ್ನು ಪಡೆದರು.
ಉಳಿದಂತೆ ಉತ್ತಮ ಪ್ರಜಾಕೀಯ ಪಾರ್ಟಿಯ ಪ್ರಜಾಕೀಯ ಲೀಲಾ ಶಿವಕುಮಾರ್ 30, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್)ಯ ಕಾಮ್ರೇಡ್ ಟಿ.ಆರ್. ಸುನಿಲ್ 22, ಪಕ್ಷೇತರ ಅಭ್ಯರ್ಥಿ ಸಿ.ಜೆ. ಅಂಬೇಡ್ಕರ್ 14, ಕರ್ನಾಟಕ ಜನತಾ ಪಕ್ಷದ ಕದಂಬ ನಾ ಅಂಬರೀಷ್ 11, ಪಕ್ಷೇತರ ಅಭ್ಯರ್ಥಿ ಕ್ರಿಸ್ಟೋಫರ್ ರಾಜ್ ಕುಮಾರ್ 11, ಕರುನಾಡು ಪಾರ್ಟಿಯ ಎಚ್.ಕೆ. ಕೃಷ್ಣ 10, ಪಕ್ಷೇತರ ಅಭ್ಯರ್ಥಿ ಎ.ಎಸ್. ಸತೀಶ್ 10, ಸೋಷಲಿಸ್ಟ್ ಪಾರ್ಟಿ (ಇಂಡಿಯಾ)ಯ ಹರೀಶ್ ಗೌಡ 9, ಪಕ್ಷೇತರ ಅಭ್ಯರ್ಥಿ ರಾಜು 9, ಕರ್ನಾಟಕ ರಾಷ್ಟ್ರ ಸಮಿತಿಯ ಎಂ.ಎಸ್. ಪ್ರವೀಣ್ 5, ಪಕ್ಷೇತರ ಅಭ್ಯರ್ಥಿಎಂ. ರಂಗಸ್ವಾಮಿ 5, ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ)ಯ ಡಾ.ಎಚ್.ಎಂ. ನಂಜುಂಡಸ್ವಾಮಿ 4, ಪಕ್ಷೇತರ ಅಭ್ಯರ್ಥಿಗಳಾದ ಎಂ.ರಾಮಮೂರ್ತಿ 4, ಪಿ.ಎಸ್. ಯಡೂರಪ್ಪ, ಸೆಕ್ಯೂಲರ್ ಡೆಮಾಕ್ರಟಿಕ್ ಕಾಂಗ್ರೆಸ್‌ನ ಎ.ಜಿ. ರಾಮಚಂದ್ರ ರಾವ್ 3, ಪಕ್ಷೇತರ ಅಭ್ಯರ್ಥಿ ದರ್ಶನ್ ಕೆ. ಪೊನ್ನೆಟಿ 3 ಅವರು ಅಂಚೆ ಹಾಗೂ ಇಟಿಪಿಬಿಎಸ್ ಮತ ಪಡೆದಿದ್ದಾರೆ. ನೋಟಾಗೆ 44 ಅಂಚೆ ಹಾಗೂ ಇಟಿಪಿಬಿಎಸ್ ಮತಗಳನ್ನು ಪಡೆದಿದೆ.