ಕೃಷಿಯೊಂದಿಗೆ ಹೈನುಗಾರಿಕೆಯಿಂದ ಕುಟುಂಬ ಸದೃಢ

sangha
Published on

ಕೊಕ್ಕರ್ಣೆ: ಕೃಷಿಯೊಂದಿಗೆ ಹೈನುಗಾರಿಕೆಯೂ ನಡೆಸಿದರೆ ಕುಟುಂಬ ಸದೃಢವಾಗುತ್ತದೆ. ಜತೆಗೆ ಸಂಘವೂ ಅಭಿವೃದ್ಧಿ ಹೊಂದಲು ಸಹಕಾರಿ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿದರು.

ಸೋಮವಾರ ಯಡ್ತಾಡಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಧೇನುವನ್ನು ಉದ್ಘಾಟಿಸಿ ಮಾತನಾಡಿದರು.

ಯಡ್ತಾಡಿ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಕೆ.ಸರ್ವೋತ್ತಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಹಾಲು ಒಕ್ಕೂಟ ನಿಕಟಪೂರ್ವ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ಕಾಪು ದಿವಾಕರ ಶೆಟ್ಟಿ, ಒಕ್ಕೂಟ ನಿಕಟಪೂರ್ವ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ನಿರ್ದೇಶಕರಾದ ಎಂ.ಸುಧಾಕರ ಶೆಟ್ಟಿ, ಸ್ಮಿತಾ ಆರ್.ಶೆಟ್ಟಿ, ಕನ್ನಾರು ಕಮಲಾಕ್ಷ ಹೆಬ್ಬಾರ್, ವ್ಯವಸ್ಥಾಪಕ ನಿರ್ದೇಶಕ ವಿವೇಕ ಡಿ, ವ್ಯವಸ್ಥಾಪಕ ಡಾ.ರವಿರಾಜ್ ಉಡುಪ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ಪಿ.ಕೆ.ರಮೇಶ್, ಯಡ್ತಾಡಿ ಗ್ರಾಪಂ ಅಧ್ಯಕ್ಷ ಎಚ್.ಪ್ರಕಾಶ್ ಶೆಟ್ಟಿ, ಶಿರಿಯಾರ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ್, ಗ್ರಾಪಂ ಸದಸ್ಯರಾದ ರಾಜೇಶ್ ನಾಯ್ಕ, ಜ್ಯೋತಿ ವಿ.ಹೆಗ್ಡೆ, ಒಕ್ಕೂಟ ಮಾಜಿ ಅಧ್ಯಕ್ಷರಾದ ಎ.ಜಗದೀಶ ಕಾರಂತ, ಶೇಡಿಕೊಡ್ಲು ವಿಠಲ್ ಶೆಟ್ಟಿ, ನಿವೃತ್ತ ವ್ಯವಸ್ಥಾಪಕ ಡಾ.ಅನಿಲ್ ಕುಮಾರ್ ಶೆಟ್ಟಿ, ಯಡ್ತಾಡಿ ಚಾಮುಂಡೇಶ್ವರಿ ದೇವಳದ ಮೊಕ್ತೇಸರ ವೈ.ವಿಠಲ್ ಹೆಗ್ಡೆ, ಸಂಘ ಉಪಾಧ್ಯಕ್ಷ ಭೋಜರಾಜ ಶೆಟ್ಟಿ, ಒಕ್ಕೂಟ ಸಹಾಯಕ ವ್ಯವಸ್ಥಾಪಕ ಡಾ.ನಿಜಾಮ್ ಪಾಟೀಲ್ ಗಣಿಹಾರ್, ವಿಸ್ತರಣಾಧಿಕಾರಿ ಸರಸ್ವತಿ, ಕಾರ್ಯದರ್ಶಿ ಚೈತ್ರಾ, ನಿರ್ದೇಶಕರಾದ ಸಂಜೀವ ಪೂಜಾರಿ, ಐತ ಮರಕಾಲ, ವಿಠಲ ಶೆಟ್ಟಿ, ಮಂಜುನಾಥ್ ಆಚಾರ್ಯ, ಶೀನ ಮರಕಾಲ, ಸುಶೀಲಾ ಎಸ್.ಶೆಟ್ಟಿ, ಚಂದು ಪೂಜಾರಿ, ಪ್ರತಿಮಾ ಶೆಟ್ಟಿ, ಬೇಬಿ ಬಾಯಿ, ಅಂಬಿಕಾ ಪೂಜಾರಿ, ಜ್ಯೋತಿ ಪೂಜಾರಿ ಉಪಸ್ಥಿತರಿದ್ದರು.

ನಿರ್ದೇಶಕಿ ಸುಶೀಲಾ ಎಸ್.ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷ ಕೆ.ಸರ್ವೋತ್ತಮ ಶೆಟ್ಟಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಚೈತ್ರಾ ವರದಿ ವಾಚಿಸಿದರು. ಸುಜಾತ ಬಾಯರಿ ಹಂದಟ್ಟು, ಭಾಸ್ಕರ್ ಶೆಟ್ಟಿ ನಿರೂಪಿಸಿದರು. ಸಿಬ್ಬಂದಿ ರಾಕೇಶ್ ಮತ್ತು ಪರಮೇಶ್ವರಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net