ಯಡ್ರಾಮಿ: ಯುವತಿಯನ್ನು ಬಲಿ ಪಡೆದ ಜೋಕಾಲಿ!

IMG-20230830-WA0075
Published on

ಯಡ್ರಾಮಿ: ಮನೆಯಲ್ಲಿ ಜೋಕಾಲಿ ಆಡುವ ವೇಳೆ ಹಗ್ಗ ಕುತ್ತಿಗೆಗೆ ಬಿದ್ದು ಸಹನಾ ಹೂಗಾರ (16) ಎಂಬ ಯುವತಿ ಮೃತಪಟ್ಟ ಘಟನೆ ಯಡ್ರಾಮಿ ಪಟ್ಟಣದ ನಾಗಲಿಂಗೇಶ್ವರ ಕಾಲೋನಿಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಪಟ್ಟಣದ ನಾಗಲಿಂಗೇಶ್ವರ ಕಾಲೋನಿ ನಿವಾಸಿ ಬಸವರಾಜ ಹೂಗಾರ ಹೋಟೆಲ್ ನಡೆಸುತ್ತಿದ್ದು, ಎಂದಿನಂತೆ ಬುಧವಾರ ಬೆಳಿಗ್ಗೆ ಹೆಂಡತಿ ಹಾಗೂ ಇನ್ನೊಬ್ಬ ಮಗನನ್ನು ಕರೆದುಕೊಂಡು ಹೊಟೆಲ್‌ಗೆ ತೆರಳಿದ್ದಾನೆ. ಬೆಳಿಗ್ಗೆ 10.30ರ ಸಮಯಕ್ಕೆ ಸ್ನಾನ ಮಾಡಲು ಮೃತ ಬಾಲಕಿಯ ಸಹೋದರ ಮನೆಗೆ ಬಂದಿದ್ದಾನೆ. ಅಕ್ಕನ ಕುತ್ತಿಗೆಗೆ ಹಗ್ಗ ಬಿಗಿದು ಕೆಳಗೆ ಬಿದ್ದಿರುವದನ್ನು ಕಂಡು ಅಳುತ್ತ ಜನರಿಗೆ ಕರೆದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯಲ್ಲಿ ಮಗಳು ಒಬ್ಬಳೆ ಇದ್ದು ಜೋಕಾಲಿ ಮೇಲೆ ಕುಳಿತು ಹಗ್ಗವನ್ನು ಸುರಿಳಿ ಹೊಡೆದು ಆಡುತ್ತಿರುವ ವೇಳೆ ಹಗ್ಗ ಕುತ್ತಿಗೆಗೆ ಬಿದ್ದು, ಬಿಡಿಸಿಕೊಳ್ಳಲಾಗದೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಇದ್ದೋಬ್ಬ ಮಗಳನ್ನ ಕಳೆದುಕೊಂಡ ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net