ಯಡೂರ ಪಿಕೆಪಿಎಸ್‌ಗೆ ದೇಸಾಯಿ ಅಧ್ಯಕ್ಷ

4Manjari3
ಯಡೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಂಜಿತ್‌ರಾವ್ ದೇಸಾಯಿ ಹಾಗೂ ಉಪಾಧ್ಯಕ್ಷ ದೀಪಕ ಮಾನೆ ಅವರನ್ನು ನಿರ್ದೇಶಕ ಮಂಡಳಿ ಸದಸ್ಯರು ಸನ್ಮಾನಿಸಿದರು. ಸಚಿನ ಪಾಟೀಲ, ಅಪ್ಪಾಸಾಹೇಬ್ ಬೆಳವಿ, ಸಂಜಯ ಚೌಹಾಣ, ವಾಲ್ಮೀಕಿ ಕೋಳಿ, ಗಣಪತಿ ಉಬರಾಣಿ ಇತರರಿದ್ದರು.
Published on

ಮಾಂಜರಿ: ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಣಜಿತರಾವ್ ಶಿವಾಜಿರಾವ್ ದೇಸಾಯಿ ಹಾಗೂ ಉಪಾಧ್ಯಕ್ಷರಾಗಿ ಯಡೂರವಾಡಿ ಗ್ರಾಮದ ದೀಪಕ ಸದಾಶಿವ ಮಾನೆ ಈಚೆಗೆ ವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎಸ್.ಪತ್ತಾರ ಘೋಷಿಸಿದರು. ಸಂಸ್ಥೆಯ ನಿರ್ದೇಶಕರಾದ ಸಚಿನ್ ಪಾಟೀಲ, ಅಪ್ಪಾಸಾಹೇಬ್ ಬೆಳವಿ, ಸಂಜಯ ಚೌಹಾಣ, ವಾಲ್ಮೀಕಿ ಕೋಳಿ, ಗಣಪತಿ ಉಬರಾಣಿ, ರೇಣುಕಾ ಅಮ್ಮಣಗಿ, ಸಂಜಯ್ ಮಾಳಕರಿ, ಸದಾಶಿವ ಸಾವಳೆ, ವಿನೋದ ಕಾಗವಾಡೆ ಇತರರು ಇದ್ದರು. ಅಧ್ಯಕ್ಷ ರಂಜಿತ ದೇಸಾಯಿ ಹಾಗೂ ಉಪಾಧ್ಯಕ್ಷ ದೀಪಕ ಮಾನೆ ಮಾತನಾಡಿ, ಡಾ.ಪ್ರಭಾಕರ್ ಕೋರೆ, ಮಹಾಂತೇಶ ಕವಟಗಿಮಠ ಹಾಗೂ ಪ್ರಕಾಶ ಹುಕ್ಕೇರಿ ಮಾರ್ಗದರ್ಶನದಲ್ಲಿ ಸಂಸ್ಥೆಯ ಆರ್ಥಿಕ ಪ್ರಗತಿಗಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net