ಸುಗಮ ಸಂಚಾರಕ್ಕೆ ಫೀಲ್ಡಿಗಿಳಿದ ಪೊಲೀಸ್

ವಿಜಯವಾಣಿ ವರದಿಗೆ ಸ್ಪಂದಿಸಿದ ಪುರಸಭೆ | ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು
ಕಕ್ಕೇರಾ ಪಟ್ಟಣದಲ್ಲಿ ಕಳೆದ ವಾರ ಬುಧವಾರ ಸಂತೆಯಲ್ಲಿ ವ್ಯಾಪಾರಸ್ಥರು ರಸ್ತೆ ಮೇಲೆ ಅಡ್ಡಾದಿಡ್ಡಿಯಾಗಿ ತಳ್ಳುಬಂಡಿ ಮತ್ತು ಬೈಕ್ ನಿಲ್ಲಿಸಿ ವ್ಯಾಪಾರ-ವಹಿವಾಟು ಮಾಡುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕಾಗಿ ಪರದಾಡುವುದನ್ನ ತಪ್ಪಿಸಲು ಪೊಲೀಸರು ಈ ವಾರದ ಬುಧವಾರ ಸಂತೆಯಲ್ಲಿ ಬೆಳಗ್ಗೆಯಿಂದ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮ ಕೈಗೊಂಡರು.
ಕಕ್ಕೇರಾ ಪಟ್ಟಣದಲ್ಲಿ ಕಳೆದ ವಾರ ಬುಧವಾರ ಸಂತೆಯಲ್ಲಿ ವ್ಯಾಪಾರಸ್ಥರು ರಸ್ತೆ ಮೇಲೆ ಅಡ್ಡಾದಿಡ್ಡಿಯಾಗಿ ತಳ್ಳುಬಂಡಿ ಮತ್ತು ಬೈಕ್ ನಿಲ್ಲಿಸಿ ವ್ಯಾಪಾರ-ವಹಿವಾಟು ಮಾಡುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕಾಗಿ ಪರದಾಡುವುದನ್ನ ತಪ್ಪಿಸಲು ಪೊಲೀಸರು ಈ ವಾರದ ಬುಧವಾರ ಸಂತೆಯಲ್ಲಿ ಬೆಳಗ್ಗೆಯಿಂದ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮ ಕೈಗೊಂಡರು.
Published on: 

ಕಕ್ಕೇರಾ: ಪಟ್ಟಣದಲ್ಲಿ ಬುಧವಾರ ನಡೆದ ಸಂತೆಯಲ್ಲಿ ಯಾವುದೇ ರೀತಿಯ ಟ್ರಾಫಿಕ್ ಸಮಸ್ಯೆಯಾಗದಂತೆ ಪೊಲೀಸ್ ಇಲಾಖೆ ಮತ್ತು ಪುರಸಭೆ ಆಡಳಿತ ಮಂಡಳಿ ಸುಗಮ ಸಂಚಾರ ಮತ್ತು ವ್ಯವಸ್ಥಿತವಾಗಿ ವ್ಯಾಪಾರ-ವಹಿವಾಟಿಗೆ ಅನುವು ಮಾಡಿಕೊಟ್ಟಿತು.

ಕಳೆದ ಬುಧವಾರದ ಸಂತೆಯಲ್ಲಿ ವ್ಯಾಪಾರಸ್ಥರು ರಸ್ತೆಯ ಎರಡು ಬದಿ ತಳ್ಳುಬಂಡಿ ನಿಲ್ಲಿಸಿ ವ್ಯಾಪಾರ-ವಹಿವಾಟು ಮಾಡುತ್ತಿರುವುದು ಮತ್ತು ಬೈಕ್ ರಸ್ತೆ ಬದಿ ನಿಲ್ಲಿಸಿದ್ದರಿಂದ ಬಸ್, ಲಾರಿ ಸೇರಿ ಇತರೆ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿತ್ತು. ಈ ಕುರಿತು ವಿಜಯವಾಣಿ ಸೆ.೨೩ರಂದು `ಸಂಚಾರಕ್ಕೆ ಅನುವು ಮಾಡಿಕೊಡಿ' ಎಂಬ ಶೀರ್ಷಿಕೆಯಡಿ ವರದಿ ಮಾಡಿದ್ದರಿಂದ ಎಚ್ಚೆತ್ತ ಪೊಲೀಸ್ ಮತ್ತು ಪುರಸಭೆ ಸಿಬ್ಬಂದಿ ಬುಧವಾರ ಬೆಳಗ್ಗೆಯೇ ಫೀಲ್ಡಿಗಿಳಿದು ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡ ಕಾರಣ ಸುಗಮವಾಗಿ ವ್ಯಾಪಾರ-ವಹಿವಾಟು ಬುಧವಾರದ ಸಂತೆಯಲ್ಲಿ ನಡೆಯಿತು.

ಪ್ರತಿ ಬುಧವಾರಕ್ಕೊಮ್ಮೆ ದೊಡ್ಡ ಪ್ರಮಾಣದಲ್ಲಿ ನಡೆಯುವ ಸಂತೆಗೆ ಪುರಸಭೆ ವ್ಯಾಪ್ತಿಯಲ್ಲದೆ ಕಕ್ಕೇರಾ ಹೋಬಳಿಯ ತಿಂಥಣಿ, ಹುಣಸಿಹೊಳೆ, ದೇವತ್ಕಲ್, ಕಾಮನಟಗಿ, ರಾಯಗೇರಾ ಗ್ರಾಮ, ದೊಡ್ಡಿ, ತಾಂಡಾಗಳ ಗ್ರಾಮೀಣ ಪ್ರದೇಶಗಳಿಂದ ಸಹಸ್ರಾರು ಗ್ರಾಹಕರು ಆಗಮಿಸುತ್ತಿದ್ದರೆ, ಮುದ್ದೇಬಿಹಾಳ, ನಾಲತವಾಡ, ಕೊಡೇಕಲ್, ಸುರಪುರ, ಹುಣಸಗಿ, ಗುರುಗುಂಟಾ, ತಾಳೀಕೋಟೆ, ದೇವದುರ್ಗ, ಸೇರಿದಂತೆ ಇತರೆ ಪ್ರಮುಖ ತಾಲೂಕಾಗಳ ಗ್ರಾಮಗಳಿಂದ ಆಗಮಿಸುವ ನೂರಾರು ವ್ಯಾಪಾರಿಗಳು ತಳ್ಳುಬಂಡಿಗಳಿAದ ಪ್ರಮುಖವಾಗಿ ಸಂಗಮೇಶ್ವರ ಮಠದ ಮುಂದೆ, ವಾಲ್ಮೀಕಿ ವೃತ್ತ, ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತಗಳಲ್ಲಿ ರಸ್ತೆ ಮೇಲೆ ಅಡ್ಡಾದಿಡ್ಡಿಯಾಗಿ ವ್ಯಾಪಾರ ವಹಿವಾಟು ಮಾಡುತ್ತಿರುವುದರಿಂದ ಹಾಗೂ ಸಂತೆಗೆ ಬರುವ ಗ್ರಾಹಕರು ಎಲ್ಲೆಂದರಲ್ಲಿ ತಮ್ಮ ಬೈಕ್‌ಗಳನ್ನು ರಸ್ತೆಯ ಎರಡು ಬದಿಗಳಲ್ಲಿ ನಿಲ್ಲಿಸುವುದರಿಂದ ಬಸ್, ಲಾರಿ, ಟಂಟA ಸೇರಿ ಇತರೆ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಆದರೆ ಪತ್ರಿಕೆ ವರದಿ ಮಾಡಿದ ತಕ್ಷಣ ಪುರಸಭೆ ಮುಖ್ಯಾಽಕಾರಿ ಮಾನಪ್ಪ ಗೋನಾಲ್ ಅವರು ಪೊಲೀಸ್ ಇಲಾಖೆಗೆ ವಿಜಯವಾಣಿ ವರದಿ ಲಗತ್ತಿಸಿ ಟ್ರಾಫಿಕ್ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸೆ.೩೦ರ ಬುಧವಾರ ಸಂತೆಯಲ್ಲಿ ಬೆಳಗ್ಗೆಯಿಂದ ಫಿಲ್ಡೀಗಿಳಿದ ಪೊಲೀಸರು, ವಾಲ್ಮೀಕಿ, ಕನಕದಾಸ, ಅಂಬೇಡ್ಕರ್, ಬಸವೇಶ್ವರ್ ಮತ್ತು ಚೌಡಯ್ಯ ವೃತ್ತಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು ಕಟ್ಟೆಚ್ಚೆರ ವಹಿಸಿದ್ದರು. ಪೊಲೀಸರ ಕ್ರಮಕ್ಕೆ ನಾಗರೀಕರು ಪ್ರಶಂಸೆ ವ್ಯಕ್ತಪಡಿಸಿದ್ದು ಪ್ರತಿ ಬುಧವಾರ ಸಂತೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net