ಸಾಮಾಜಿಕ ಕೆಲಸಕ್ಕೆ ಪ್ರಜ್ಞಾವಂತರ ಮೆಚ್ಚುಗೆ

ಜನರ ಮನೆ ಬಾಗಿಗೆ ನ್ಯಾಯಾಲಯ | ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಕಾರ್ಯ
ಯಾದಗಿರಿ ನಗರದ ಅಂಗಡಿಗಳಿಗೆ ಭೇಟಿ ನೀಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಹಿರಿಯ ಸಿವಿಲ್ ನ್ಯಾಯಾಧಿಶ ಮರಿಯಪ್ಪ ಅವರು ಪ್ಲಾಸ್ಟಿಕ್ ಬಳಕೆ ಪರಿಶೀಲಿಸಿದರು.
ಯಾದಗಿರಿ ನಗರದ ಅಂಗಡಿಗಳಿಗೆ ಭೇಟಿ ನೀಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಹಿರಿಯ ಸಿವಿಲ್ ನ್ಯಾಯಾಧಿಶ ಮರಿಯಪ್ಪ ಅವರು ಪ್ಲಾಸ್ಟಿಕ್ ಬಳಕೆ ಪರಿಶೀಲಿಸಿದರು.
Published on: 

ಯಾದಗಿರಿ: ಲೋಕ ಅದಾಲತ್ ಮೂಲಕ ವಿವಿಧ ಪ್ರಕರಣ ಬಗೆಹರಿಸುವ ಮಹತ್ವದ ಕೆಲಸ ಮಾಡುತ್ತಿರುವ ಕಾನೂನು ಸೇವೆಗಳ ಪ್ರಾಧಿಕಾರದ ಇಲ್ಲಿನ ಜಿಲ್ಲಾ ಘಟಕ ಸದ್ದಿಲ್ಲದ್ದೇ ವಿವಿಧ ಸಾಮಾಜಿಕ ಕಳಕಳಿಯ ಕೆಲಸ ಮಾಡುವ ಮೂಲಕ ಜನಪರ ಪ್ರಾಧಿಕಾರವೆಂದೇ ಪ್ರಜ್ಞಾವಂತರಿಂದ ಕರೆಯಿಸಿಕೊಳ್ಳುತ್ತಿದೆ.

ಪ್ರಾಽಕಾರದಿಂದ ಎಲ್ಲೆಡೆ ನಿತ್ಯ ಒಂದಿಲ್ಲೊಂದು ಕೆಲಸ ನಿಯಮದಂತೆ ನಡೆಯುತ್ತಿದ್ದರೂ ಗಿರಿಜಿಲ್ಲೆಯಲ್ಲಿನ ಪ್ರಾಽಕಾರದ ಜಿಲ್ಲಾ ಘಟಕವು ಕೆಲ ವಿಶೇಷ ಕೆಲಸ ಮಾಡುವ ಮೂಲಕ ಸಾರ್ವಜನಿಕರ ಹೃದಯದಲ್ಲಿ ಸ್ಥಾನ ಪಡೆಯುತ್ತಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧಿಶ ಮರುಳಾಸಿದ್ಧಾರಾಧ್ಯ ಎಚ್.ಜೆ. ಅವರ ಮಾರ್ಗದರ್ಶನದಲ್ಲಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಅವರ ಉಸ್ತುವಾರಿಯಲ್ಲಿ ವಿವಿಧ ಇಲಾಖೆಗಳ ಮತ್ತು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಹಲವಾರು ಜನಮುಖಿ ಕೆಲಸಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರಾಧಿಕಾರವು ಮಾಡುತ್ತಿರುವ ವಿವಿಧ ಕೆಲಸಗಳ ಮೇಲೆ ಒಮ್ಮೆ ನಿಗಾ ಹಾಯಿಸಿದರೆ ಎಂತಹವರು ಸಹ ಖುಷಿ ಪಡುತ್ತಾರೆ.

ಉಚಿತ ಆರೋಗ್ಯ ಶಿಬಿರ, ಇಲ್ಲಿನ ಯಿಮ್ಸ್ ನಲ್ಲಿ ಸ್ವಚ್ಛತಾ ಶಿಬಿರ, ಅಂಗವಿಕಲರಿಗೆ ವಿಶೇಷ ಆರೋಗ್ಯ ಶಿಬಿರ, ಸಲಕರಣೆಗಳ ವಿತರಣೆ, ಕಣ್ಣಿನ ತಪಾಸಣೆ ಅಲ್ಲದೇ ಕಾನೂನಿನ ಅರಿವು ಮೂಡಿಸುವ ಜಾಗೃತಿ ಶಿಬಿರ, ಪರಿಸರ ದಿನ, ವಿಶ್ವ ಜಲ ದಿನ ನಿಮಿತ್ತ ತುಮಕೂರು ಮೂಲಕ ಎನ್‌ಜಿಒ ಅವರಿಂದ ನೀರಿನ ಮಹತ್ವ ತಿಳಿಸುವ ಮತ್ತು ಸಕಲ ಜಲಚರಗಳಿಗೆ ನೀರಿನ ಅಗತ್ಯ ಕುರಿತು ಪ್ರಾತ್ಯಕ್ಷಿಕೆ, ಇದಲ್ಲದೇ ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ವಾರಗಟ್ಟಲ್ಲೆ ನಗರ ಸೇರಿ ಜಿಲ್ಲೆಯ ಎಲ್ಲೆಡೆ ಜಾಗೃತಿ ಅಭಿಯಾನ ಮಾಡಿರುವ ಕಾನೂನು ಸೇವೆಗಳ ಪ್ರಾಧಿಕಾರವು, ಈಗ ಕಳೆದ ಒಂದು ವಾರದಿಂದ ನಗರದ ಎಲ್ಲೆಡೆ ಸಂಚಾರ ನಿಯಮ ಪಾಲಿಸುವ ಕುರಿತು ಜನ ಜಾಗೃತಿ ಅಭಿಯಾನವೂ ಅತ್ಯಂತ ಯಶಸ್ಸು ಆಗಿದೆ.

ನಿಯಮಗಳು ಪಾಲಿಸಿ

ಮುಖ್ಯವಾಗಿ ಪ್ಲಾಸ್ಟಿಕ್ ಬಳಗೆ ನಿಷೇಧ ಕುರಿತು ಮತ್ತು ಸಂಚಾರ ನಿಯಮ ಪಾಲಿಸುವ ಕುರಿತು ನಗರ ಸೇರಿ ಜಿಲ್ಲೆಯ ಎಲ್ಲೆಡೆ ಜಾಗೃತಿ ಮೂಡಿಸುವ ಕೆಲಸ ಪೊಲೀಸ್ ಹಾಗೂ ವಿವಿಧ ಇಲಾಖೆ ಮತ್ತು ಸಂಘ-ಸಂಸ್ಥೆಗಳ ಸಹಕಾರದಿಂದ ಮಾಡಲಾಗಿದೆ. ಜನರು ನಿಯಮ ಮತ್ತು ಕಾನೂನುಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮರುಳಾಸಿದ್ಧಾರಾಧ್ಯ ಎಚ್.ಜೆ.ಮನವಿ ಮಾಡಿದ್ದಾರೆ.

ಬಾಚವಾರ ಗ್ರಾಮ ಆಯ್ಕೆ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಡಿ ಇರುವ ೧೩ ವಿವಿಧ ಸೌಲಭ್ಯಗಳನ್ನು ಜನರಿಗೆ ಒದಗಿಸಲು ಜಿಲ್ಲೆಯ ಯಾದಗಿರಿ ತಾಲೂಕಿನ ಬಾಚವಾರ ಗ್ರಾಮ ಆಯ್ಕೆಯಾಗಿದ್ದು, ಅಲ್ಲಿನ ಬಡವರಿಗೆ, ಎಸ್‌ಸಿ, ಎಸ್‌ಟಿ ಜನರಿಗೆ ಜನನ, ಮರಣ ಪತ್ರ, ಮಾಸಾಶನ, ಪಡಿತರ ಚೀಟಿ ವಿತರಣೆ, ವಿಧವಾ ವೇತನ, ಅಂಗವಿಕಲರಿಗೆ ಮಾಸಾಶನ ಗ್ರಾಪಂನಿಂದ ಜಾಬ್ ಕಾರ್ಡ್ ವಿತರಣೆ ಹೀಗೆ ೧೩ ಸೌಲಭ್ಯಗಳನ್ನು ನೀಡಲಾಗುವುದು. ಇದಕ್ಕಾಗಿ ಪ್ರಥಮ ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಮುಂಬರುವ ದಿನಗಳಲ್ಲಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಮರಿಯಪ್ಪ ತಿಳಿಸಿದ್ದಾರೆ.

ಐದು ವರ್ಷದಲ್ಲಿ ೫ ಕೋಟಿ ಸಸಿ ನೆಡುವ ಗುರಿ

ಪರಿಸರ ದಿನ ನಿಮಿತ್ತ ಐದು ವರ್ಷಗಳಲ್ಲಿ ೫ ಕೋಟಿ ಸಸಿಗಳನ್ನು ನೆಟ್ಟು ಅವುಗಳನ್ನು ಪೊಷಿಸುವ ಮಹತ್ವದ ಕೆಲಸಕ್ಕೆ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಈಗಾಗಲೇ ಮುಂದಾಗಿದ್ದು, ಈ ನಿಮಿತ್ತ ಜಿಲ್ಲೆಯಲ್ಲೂ ಸಹ ಈ ಕಾರ್ಯ ಮುಂದುವರೆದಿದೆ. ಮುಂದಿನ ೨-೩ವರ್ಷಗಳಲ್ಲಿ ಆಯ್ದ ಸ್ಥಳಗಳಾದ ಶಾಲಾ-ಕಾಲೇಜು ಆವರಣ, ವಸತಿ ಕಟ್ಟಡದ ಆವರಣ, ಅರಣ್ಯ ಪ್ರದೇಶ ಸೇರಿ ಮುಖ್ಯ ರಸ್ತೆಗಳಲ್ಲಿ ಸಸಿ ನೆಟ್ಟು ಪೋಷಿಸುವ ಕೆಲಸ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net