ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೊಚ್ಚಿಗೆದ್ದ ರೈತರು

ಅಧಿಕಾರಿಗೆ ಘೇರಾವ್ ಹಾಕಿ ದಿಢೀರ್ ಪ್ರತಿಭಟನೆಗಿಳಿದ ಅನ್ನದಾತರು | ಪರದಾಡಿದ ಪ್ರಯಾಣಿಕರು
ಉಪ ಕಾಲುವೆ ಸಮರ್ಪಕ ನಿರ್ವಹಣೆ ಮಾಡದ ಅಧಿಕಾರಿಗಳ ನಡೆ ಖಂಡಿಸಿ ಶಹಾಪುರ ಹಾಗೂ ಸುರಪುರ ಮತಕ್ಷೇತ್ರದ ಹಲವು ಗ್ರಾಮಗಳ ನೂರಾರು ರೈತರು ಶನಿವಾರ ಕೆಂಭಾವಿ ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಅಧಿಕಾರಿಗಳಿಗೆ ಘೇರಾವ್ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
ಉಪ ಕಾಲುವೆ ಸಮರ್ಪಕ ನಿರ್ವಹಣೆ ಮಾಡದ ಅಧಿಕಾರಿಗಳ ನಡೆ ಖಂಡಿಸಿ ಶಹಾಪುರ ಹಾಗೂ ಸುರಪುರ ಮತಕ್ಷೇತ್ರದ ಹಲವು ಗ್ರಾಮಗಳ ನೂರಾರು ರೈತರು ಶನಿವಾರ ಕೆಂಭಾವಿ ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಅಧಿಕಾರಿಗಳಿಗೆ ಘೇರಾವ್ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
Published on: 

ಕೆಂಭಾವಿ: ಉಪ ಕಾಲುವೆ ಸಮರ್ಪಕ ನಿರ್ವಹಣೆ ಮಾಡದ ಅಽಕಾರಿಗಳ ನಡೆ ಖಂಡಿಸಿ ರೊಚಿಗೆದ್ದ ಶಹಾಪುರ ಹಾಗೂ ಸುರಪುರ ಮತಕ್ಷೇತ್ರದ ಹಲವು ಗ್ರಾಮಗಳ ನೂರಾರು ರೈತರು ಶನಿವಾರ ಪಟ್ಟಣದ ಸುರಪುರ-ಹುನಗುಂದ ರಾಜ್ಯ ಹೆದ್ದಾರಿಯಲ್ಲಿ ಅಽಕಾರಿಗಳಿಗೆ ಘೇರಾವ್ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.

ಶಹಾಪುರ ಶಾಖಾ ಕಾಲುವೆಯ ಉಪ ಕಾಲುವೆ ಸಂಖ್ಯೆ ಡಿ-೧ರಲ್ಲಿ ಬರುವ ಶಹಾಪುರ ಮತಕ್ಷೇತ್ರದ ಪರಸನಹಳ್ಳಿ, ಹೆಗ್ಗಣದೊಡ್ಡಿ, ಮಾಲಗತ್ತಿ, ಕತರಡಕಲ್, ಜೈನಾಪುರ, ಗೊಡ್ರಿಹಾಳ ಹಾಗೂ ಸುರಪುರ ಮತಕ್ಷೇತ್ರದ ಕೂಡಲಗಿ, ಬೈಚಬಾಳ, ಕಚನೂರ ಸೇರಿ ಕಾಲುವೆ ಕೊನೇ ಭಾಗದ ನೂರಾರು ರೈತರು ದಿಢೀರ್ ಪ್ರತಿಭಟನೆ ನಡೆಸಿ ಕೆಬಿಜೆಎನ್‌ಎಲ್ ಮಾಲಗತ್ತಿ ಉಪ ವಿಭಾಗದ ಎಇಇ ಅಶೋಕ ಅವರನ್ನು ಇಲಾಖೆ ಜೀಪ್ ಮೇಲೆ ಕೂಡಿಸಿ ತಾಸುಗಟ್ಟಲೆ ಮುಖ್ಯ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಹಲವು ರೈತರು, ಕಳೆದ ಒಂದು ವಾರದಿಂದ ಉಪ ಕಾಲುವೆಯ ಗೇಟ್ ಸಂಪೂರ್ಣ ಕೆಟ್ಟುಹೋಗಿ ಕುಸಿದು ಬಿದ್ದಿದೆ. ಇದೀಗ ನೀರು ಬಂದಿದ್ದು ನೀರಿನ ರಭಸದಿಂದ ಗೇಟ್ ದುರಸ್ತಿ ಕಾರ್ಯ ಕಷ್ಟಸಾಧ್ಯವಾಗಿದ್ದು, ಈ ಬಗ್ಗೆ ಹಲವು ಬಾರಿ ಅಽಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬಿತ್ತಿದ ಬೆಳೆ ಒಣಗುವ ಹಂತಕ್ಕೆ ತಲುಪಿದ್ದು, ರೈತರು ಸಾವಿರಾರು ರೂ. ಖರ್ಚು ಮಾಡಿ ಗೇಟ್ ದುರಸ್ತಿಗೆ ಮುಂದಾಗಿದ್ದರೂ ಹಣ ವ್ಯರ್ಥವಾಯಿತೆ ಹೊರತು ಗೇಟ್ ಮಾತ್ರ ದುರಸ್ತಿ ಆಗಲಿಲ್ಲ ಎಂದು ದೂರಿದರು.

ಪ್ರತಿಭಟನೆ ಸುದ್ದಿ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಶಹಾಪುರ ಸಿಪಿಐ ದೀಪಕ ಭೋಸರಡ್ಡಿ, ಪ್ರತಿಭಟನಾಕಾರ ಜತೆ ಅಽಕಾರಿಗಳು ಮಾತನಾಡಿ ಕೆಲ ಗಂಟೆಗಳಲ್ಲಿ ನಾನೇ ಖುದ್ದಾಗಿ ಸ್ಥಳದಲ್ಲಿದ್ದು ಗೇಟ್ ದುರಸ್ತಿಗೊಳಿಸಿ ರೈತರಿಗೆ ನೀರು ಒದಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಮುಖ್ಯ ರಸ್ತೆಯಲ್ಲಿ ದಿಢೀರ್ ನಡೆದ ಈ ಪ್ರತಿಭಟನೆಯಿಂದ ಹಲವು ಬಸ್‌ಗಳು ಹಾಗೂ ಖಾಸಗಿ ವಾಹನಗಳು ಮುಖ್ಯ ರಸ್ತೆ ಮೇಲೆ ನಿಂತಿದ್ದರೆ ಇನ್ನು ಕೆಲ ಬಸ್‌ಗಳು ಮತ್ತು ಖಾಸಗಿ ವಾಹನಗಳು ಕಾಲುವೆ ಎಡಭಾಗದ ಕಚ್ಚಾ ರಸ್ತೆ ಮೂಲಕ ಸಂಚಾರ ಮಾಡಿದವು. ಒಟ್ಟಾರೆ ದಿಢೀರ್ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಕೆಲ ಹೊತ್ತು ತೊಂದರೆ ಅನುಭವಿಸುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net