

ಯಾದಗಿರಿ: ಜಿಲ್ಲಾ ಕೇಂದ್ರದಿಂದ ರಾಣೆಬೆಣ್ಣೂರ-ಹಾವೇರಿಗೆ ನಿತ್ಯ ಸಂಚರಿಸುವ ನಾನ್ ಎಸಿ ಸ್ಲೀಪರ್ ಅಮೋವರ್ಷ ಹೆಸರಿನ ಎರಡು ಬಸ್ಗಳಿಗೆ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಆವರಣದಲ್ಲಿ ಭಾನುವಾರ ಶ್ರೀ ಡಾ.ಗಂಗಾಧರ ಸ್ವಾಮೀಜಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಶ್ರೀಗಳು, ಲಿಂಗಸೂಗುರು, ಗಂಗಾವತಿ, ಸಿಂಧನೂರ, ವಿಜಯನಗರ (ಹೊಸಪೇಟೆ), ಹರಿಹರ, ರಾಣೆಬೆಣ್ಣೂರ ಮತ್ತು ಹಾವೇರಿಗಳಿಂದ ಅಬ್ಬೆತುಮಕೂರಿಗೆ ಬರುವ ಸಾವಿರಾರು ಭಕ್ತರು ಬಹುದಿನಗಳಿಂದ ನೇರ ಸಾರಿಗೆ ಸಂಪರ್ಕದ ಕೊರತೆ ಬಗ್ಗೆ ತಿಳಿಸಿದ್ದರು. ನಂತರ ತಾವು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಕೆಕೆಆರ್ಟಿಸಿ ಅಧ್ಯ ಅರುಣಕುಮಾರ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕಿ ಡಾ.ಸುಶೀಲಾ, ವಿಭಾಗೀಯ ನಿಯಂತ್ರಣಾಧಿಕಾರಿ ಮಂಜುನಾಥ ಜತೆ ಮಾತನಾಡಿ, ಯಾದಗಿರಿಯಿಂದ ಹಾವೇರಿಗೆ ಬಸ್ ಸೌಲಭ್ಯದ ಕಲ್ಪಿಸುವಂತೆ ಕೋರಿದ್ದೆ. ಸ್ಪಂದಿಸಿದ ಕೆಕೆಆರ್ಟಿಸಿ ನೂತನ ಬಸ್ಗಳಿಗೆ ಚಾಲನೆ ನೀಡಿದೆ ಎಂದು ಹೇಳಿದರು.
ಮಠದ ಮಾಧ್ಯಮ ವಕ್ತಾರ ಡಾ.ಸುಭಾಷಚಂದ್ರ ಕೌಲಗಿ, ಟಕ ವ್ಯವಸ್ಥಾಪಕ ರಮೇಶ ತಾಳಿಕೋಟೆ, ಸಂಚಾರಿ ಅಧೀಕ ಪಾಂಡುರಂಗ ಕುಲಕರ್ಣಿ, ಪತ್ತಿನ ಸಹಕಾರ ಸಂದ ಅಧ್ಯ ಪ್ರಶಾಂತ ಪಾಟೀಲ್, ಸಹಾಯಕ ಸಂಚಾರಿ ನಿಯಂತ್ರಕ ಸಂಜೀವಕುಮಾರ, ವಾಹನ ಚಾಲಕರಾದ ಹಣಮಂತ, ಪರಶುರಾಮ, ಡಿಸಿ ಆಪ್ತ ಹರೀಶ, ವಿರುಪಾ, ಚಂದ್ರಶೇಖರ ಇತರರಿದ್ದರು.