

ಕೆಂಭಾವಿ: ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕೆಂಭಾವಿ ಪಟ್ಟಣದ ಮತದಾನ ಕೇಂದ್ರದಲ್ಲಿ ಶಾಂತಿಯುವಾಗಿ ಮತದಾನ ನಡೆಯಿತು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತದಾನ ಕೇಂದ್ರದಲ್ಲಿ ಬೆಳಗ್ಗೆ 8ರಿಂದ ಆರಂಭವಾದ ಮತದಾನ 11ರ ವರೆಗೆ ಮಂದಗತಿಯಿಂದ ಸಾಗಿತು. 11&30ರ ನಂತರ ವೇಗ ಪಡೆದ ಮತದಾನ ಪ್ರಕ್ರಿಯೆ ಶಿಕ್ಷಕರು ಹಂತ ಹಂತವಾಗಿ ಆಗಮಿಸಿ ತಮ್ಮ ಮತದಾನ ಹಕ್ಕು ಚಲಾಯಿಸಿದರು. ಒಟ್ಟು 111 ಶಿಕ್ಷಕ ಮತದಾರರಲ್ಲಿ 103 ಜನ ಶಿಕ್ಷಕ ಮತದಾರರು ಮತದಾನ ಮಾಡಿದರು. ಶೇ. 92.79ರಷ್ಟು ಮತದಾನವಾಯಿತು. ಮುನ್ನೆಚ್ಚಿರಿಕೆಯಾಗಿ ಪಿಎಸ್ಐ ಸುವರ್ಣ ಮಲಶೆಟ್ಟಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.ಎರಡೂ ಪಕ್ಷದಿಂದ ಟೆಂಟ್ ಮನೆ&ಮತದಾನ ಕೇಂದ್ರದಲ್ಲಿ ಮತದಾನ ನಡೆಯುತ್ತಿದ್ದರೆ ಇತ್ತ ಹೊರಗೆ (ಮತದಾನ ಕೇಂದ್ರದ ಸರಹದ್ದು ದಾಟಿ) ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷ ಎರಡು ಕಡೆ ಬೃಹತ್ ಟೆಂಟ್ ಹಾಕಿ ಮತದಾನ ಮಾಡುವ ಶಿಕ್ಷಕರ ಪಟ್ಟಿ ಸೇರಿದಂತೆ ಇನ್ನಿತರೆ ರಾಜಕೀಯ ಚಟುವಟಿಕೆಯಲ್ಲಿ ಪಕ್ಷದ ಪ್ರಮುಖರು ತೊಡಗಿದ್ದರು. ಕಾಂಗ್ರೇಸ್ ಟೆಂಟ್ ಮನೆಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸನಗೌಡ ಹೊಸಮನಿ ಯಾಳಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಚಿಂಚೋಳಿ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ, ರಂಗಪ್ಪ ವಡ್ಡರ್ ಇದ್ದರು. ಬಿಜೆಪಿ ಟೆಂಟ್ ಮನೆಯಲ್ಲಿ ಸುರಪುರ ಹಾಗೂ ಶಹಾಪೂರ ನಗರಗಳಿಂದ ಆಗಮಿಸಿದ ಪಕ್ಷದ ಪ್ರಮುಖರ ಜೊತೆ ಸ್ಥಳಿಯವಾಗಿ ಪುರಸಭೆ ಸದಸ್ಯ ಶರಣಪ್ಪ ಅಂಗಡಿ, ಉಮೇಶರೆಡ್ಡಿ, ಮಂಜು ತುಂಬಗಿ, ಚಂದ್ರು ಯಾಳಗಿ, ಭೀಮನಗೌಡ ಮುದನೂರ, ಹಳ್ಳೆಪ್ಪ ಕವಾಲ್ದಾರ ಇತರರಿದ್ದರು