ವಾಲ್ಮೀಕಿ ರಾಮಾಯಣ ಸರ್ವಕಾಲಕ್ಕೂ ಪ್ರಸ್ತುತ

ಯಾದಗಿರಿಯಲ್ಲಿ ಭಾನುವಾರ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕ ಯುವ ಸಂ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು. ಶ್ರೀ ವರದಾನಂದೇಶ್ವರ ಸ್ವಾಮೀಜಿ, ಮಹೇಶರಡ್ಡಿ ಮುದ್ನಾಳ್​, ನರಸಪ್ಪ ನಾಯಕ, ಪಂಪಣ್ಣಗೌಡ ತುನ್ನೂರ, ಹಣಮೇಗೌಡ ಬೀರನಕಲ್​ ಇತರರಿದ್ದರು.
ಯಾದಗಿರಿಯಲ್ಲಿ ಭಾನುವಾರ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕ ಯುವ ಸಂ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು. ಶ್ರೀ ವರದಾನಂದೇಶ್ವರ ಸ್ವಾಮೀಜಿ, ಮಹೇಶರಡ್ಡಿ ಮುದ್ನಾಳ್​, ನರಸಪ್ಪ ನಾಯಕ, ಪಂಪಣ್ಣಗೌಡ ತುನ್ನೂರ, ಹಣಮೇಗೌಡ ಬೀರನಕಲ್​ ಇತರರಿದ್ದರು.
Published on: 

ಯಾದಗಿರಿ: ಆದಿಕವಿ ಮಹರ್ಷಿ ವಾಲ್ಮೀಕಿ ಸಾವಿರಾರು ವರ್ಷ ಹಿಂದೆ ಬರೆದ ರಾಮಾಯಣ ಇಂದಿಗೂ ಮುಂದೆಯೂ ಪ್ರಸ್ತುತವಾಗಿರಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್​ ಹೇಳಿದರು.

ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕ ಯುವ ಸಂಘ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಸಾಧಕ ಶಿಕ್ಷಕರು ಮತ್ತು ಪತ್ರಕರ್ತರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಏಳಿಗೆಗೆ ವಾಲ್ಮೀಕಿ ಸಮುದಾಯದ ಕೊಡುಗೆ ಅಪಾರವಾಗಿದೆ. ಮುಖಂಡ ನರಸಪ್ಪ ನಾಯಕ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು.

ಪ್ರಥಮ ದರ್ಜೆ ಗುತ್ತಿಗೆದಾರ ಹಣಮೇಗೌಡ ಬೀರನಕಲ್​ ಮಾತನಾಡಿ, ಸಮಾಜದ ಯುವಕ ಸಂಘ ಪ್ರೇರಣಾದಾಯಿ ಕಾರ್ಯ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗೋಲಪಲ್ಲಿ ವಾಲ್ಮೀಕಿ ಗುರುಪೀಠದ ಶ್ರೀ ವರದಾನಂದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್​ ಯುವ ಮುಖಂಡ ಪಂಪಣ್ಣಗೌಡ ಪಾಟೀಲ್​ ತುನ್ನೂರ, ಸಮಾಜದ ಜಿಲ್ಲಾದ್ಯ ಗೌಡಪ್ಪಗೌಡ ಆಲ್ದಾಳ, ಆರ್​. ಚನ್ನಬಸ್ಸು ವನದುರ್ಗ, ಹಣಮೇಗೌಡ ಮರ್ಕಲ್​, ವಿಜಯಕುಮಾರ ಶಿರಗೋಳ ಮಾತನಾಡಿದರು.

ರಾಯಚೂರು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ವೆಂಕಟೇಶ ಅಸ್ಕಿಹಾಳ, ರಾಜಕುಮಾರ ದೇವದುರ್ಗ, ಸುರಪುರದ ಗಂಗಾಧರ ನಾಯಕ, ಸಿದ್ದನಗೌಡ ಕರಿಭಾವಿ, ನ್ಯಾಯವಾದಿ ಎಸ್​.ಬಿ. ನಾಯಕ, ಅಜೀಜ್​ ಸೆಹನಾ, ಮರೆಪ್ಪ ಚಟ್ಟೇರಕರ ಇತರರಿದ್ದರು. ಸಂಘದ ಜಿಲ್ಲಾದ್ಯಕ್ಷ ಬಿ.ಬಿ. ನರಸಪ್ಪ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಭೀಮರಾಯ ನಿರೂಪಣೆ ಮಾಡಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪತ್ರಕರ್ತರಾದ ವೈಜನಾಥ ಹಿರೇಮಠ, ಇಂದುಧರ ಸಿನ್ನೂರ, ಸಿದ್ದಪ್ಪ ಲಿಂಗೇರಿ, ಅರುಣ ಮಾಸನ್​ ಅವರನ್ನು ಸನ್ಮಾನಿಸಲಾಯಿತು. ಸಂಗೀತ ಶಿಕ್ಷಕ ಸಾಬಯ್ಯ ಮಾಸ್ಟರ್​ ಮತ್ತು ಸಂಗಡಿಗರಿಂದ ವಚನ ಪ್ರಾರ್ಥನೆ ನಡೆಯಿತು. ಎಂಜೆ ಡಾನ್ಸ್​ ಅಕಾಡೆಮಿಯ ಸುಷ್ಮಿತಾ, ಶ್ರದ್ಧಾ, ಸಮೀಕ್ಷೆ ವಚನ ನೃತ್ಯ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net