

ಶಹಾಪುರ: ಜಿಲ್ಲೆಯಲ್ಲಿಯೇ ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೇವೆ ನೀಡುವ ಟೆಂಟ್ ಹೌಸ್, ಡೆಕೋರೇರ್ಟಸ್ ಹಾಗೂ ಧ್ವನಿಬೆಳಕು ಬೆಳಕು ವ್ಯಾಪಾಸ್ಥರು ಸಗರ ನಾಡಿನ ಕೇಂದ್ರ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ನಗರದ ರಾಯಲ್ ಪ್ಯಾಲೇಸ್ನಲ್ಲಿ ಭಾನುವಾರ ಹಮ್ಮಿಕೊಂಡ ಟೆಂಟ್/ಧ್ವನಿ ಬೆಳಕು ಹಾಗೂ ಡೆಕೋರೇರ್ಟಸ್ ಮಾಲೀಕರ ಸಂದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರ ಬೇಡಿಕೆಗೆ ತಕ್ಕಂತ ಎಲ್ಲ ಸಾಮಾಗ್ರಿಗಳು ಇಲ್ಲಿಯೇ ಸಿಗುವುದರಿಂದ ಸೋಲಾಪುರ, ಹೈದ್ರಾಬಾದ್ಗೆ ಹೋಗುವ ಅವಕಾಶವನ್ನು ಗ್ರಾಹಕರಿಗೆ ತಪ್ಪಿಸಿ ಗುಣಮಟ್ಟದ ಸೌಲಭ್ಯ ನೀಡುವುತ್ತಿವುದು ಸಂತಸದ ಸಂಗತಿಯಾಗಿದೆ ಎಂದರು.
ಸರ್ಕಾರಿ ಅಥವಾ ಖಾಸಗಿ ಕಂಪನಿಗಲ್ಲಿ ಹಗಲು-ರಾತ್ರಿ ದುಡಿಯುವುದಕ್ಕಿಂತ ಇಂತಹ ವ್ಯಾಪಾರ ಮಾಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಲ್ಲಿ ದುಡಿಮೆಗೆ ತಕ್ಕ ಲಾಭವು ದೊರೆಯಲಿದೆ ಎಂದು ಯುವಕರಿಗೆ ಅವರು ಕಿವಿಮಾತು ಹೇಳಿದರು.
ಸಂಘದ ಉತ್ತರ ಕರ್ನಾಟಕ ಅಧ್ಯಕ್ಷ ಜಿ.ಶ್ರೀನಿವಾಸ ಮಾತನಾಡಿ, ಸಂಘದ ಸಮಸ್ಯೆ ಬೇಡಿಕೆಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ಸ್ಪಂದಿಸಬೇಕು. ನಮ್ಮ ಸಂಘದ ಜವಾಬ್ದಾರಿ ಅತ್ಯಂತ ಕಠಿಣವಾಗಿದ್ದು, ಅದನ್ನು ನಿಭಾಯಿಸಬೇಕಾದರೆ ಜವಾಬ್ದಾರಿ ನಿರ್ವಹಿಸುತ್ತಿರುವ ನಮಗೆ ಗೊತ್ತು. ಹೀಗಾಗಿ ಜನಪ್ರತಿನಿಧಿಗಳ ಮತ್ತು ಜಿಲ್ಲಾಡಳಿತದ ಸ್ಪಂದಿಸುವುದು ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ದಿಗ್ಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಬಾರಗೇರಿ ಹಿರೇಮಠದ ಶ್ರೀ ಸೂಗೂರೇಶ್ವರ ಶಿವಾಚಾರ್ಯರು, ಗೋಗಿ ಚಂದಾಹುಸೇನಿ ದರ್ಗಾದ ಹಜರತ್ ಸಯ್ಯದ್ ಶಾ ಇಸ್ಮಾಯಿಲ್ ಹುಸೇನಿ ಆಸೀಫ್ ಸಾಹೇಬ್, ಸಜ್ಜಾದೆ ನಸೀನ್ ದರ್ಗಾದ ಹಜರತ್ ಸಯ್ಯದ್ ಶಾ ಮಹ್ಮದ್ ಹುಸೇನಿ ಕೋಹಸವಾರಾ ಮತ್ತು ಚರಬಸವೇಶ್ವರ ದೇವಸ್ಥಾನದ ಶರಣು ಗದ್ದುಗೆ ಸಾನ್ನಿಧ್ಯ ವಹಿಸಿದ್ದರು.ನಗರಯೋಜನಾ ಪ್ರಾಧಿಕಾರ ಅಧ್ಯ ಸಿದ್ದು ಆರಬೋಳ, ಸಂಘದ ಪದಾಧಿಕಾರಿಗಳು ಮತ್ತು ಪ್ರಮುಖರಾದ ಶಿವಶರಣಪ್ಪ ಕನ್ಯಾಕೋಳೂರ, ರಾಮಲಿಂಗ ಮಣಿಗಿರಿ, ಅರವಿಂದ ಉಪ್ಪಿನ್, ಮಹ್ಮದ್ ಇಸೂಬ್ಸಾಬ್ ಕಾಲೆಮತ್ತು, ತೇಜವೀರ್ ಸಿಂಗ್, ದೇವು ಬಿ.ಗುಡಿ, ಬಸವರಾಜ ಕೋಳೂರ, ಬಸನಗೌಡ ನಗನೂರ, ಶೇಖಹ್ಮದ್ ನಾರಾಯಣಪುರ, ಸುರೇಶ ದೇಸಾಯಿ, ಸತ್ಯಾನಾರಾಯಣ, ಸಂತೋಷ ಭಾಸುತ್ಕರ್, ಜಾವೀದ ಖಾನಾಪುರ ಇತರರಿದ್ದರು.
ಸಂಘಕ್ಕೆ ನಗರದಲ್ಲಿ ಕಡಿಮೆ ದರದಲ್ಲಿ ಸಿಎ ಸೈಟ್ ಕಲ್ಪಿಸುವ ಭರವಸೆ ನೀಡಿದ ಶಾಸಕ ಶರಣಬಸಪ್ಪ ದರ್ಶನಾಪುರ, ಡಿಜೆಯಿಂದ ಅನಾರೋಗ್ಯವೇ ಜಾಸ್ತಿ. ಹೀಗಾಗಿ ಆ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತಾಡಿ ಆದಷ್ಟು ಡಿಜೆ ಸೌಂಡ್ ಸಿಸ್ಟಮ್ ಪರಿಶೀಲಿಸಿ ಅನುಮತಿ ಕಲ್ಪಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅಲ್ಲದೆ ನಿಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನಿವೇಶನ ರಹಿತರಿಗೆ ಅರ್ಹತೆ ಆಧಾರದ ಮೇಲೆ ನಿವೇಶನ ಒದಗಿಸುವುದಾಗಿ ಭರವಸೆ ನೀಡಿದರು.