

ಯಾದಗಿರಿ: ಪಾರ್ಶ್ವವಾಯು ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಇದರ ಲಕ್ಷಣಗಳನ್ನು ಆರಂಭದಲ್ಲೆ ಗುರುತಿಸಿ ತಕ್ಷಣ ಸೂಕ್ತ ವೈದ್ಯಕಿಯ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ ಎಂದು ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ಪದ್ಮಾನಂದ ಗಾಯಕ್ವಾಡ್ ತಿಳಿಸಿದರು.
ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಹಾಗೂ ಯಿಮ್ಸ್ ಆಸ್ಪತ್ರೆಯಿಂದ ವಿಶ್ವ ಸ್ಟ್ರೊಕ್ ದಿನ ನಿಮಿತ್ತ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾರ್ಶ್ವವಾಯು (ಸ್ಟ್ರೊಕ್) ಕುರಿತು ಜಾಗೃತಿ ಕುರಿತು ಮಾತನಾಡಿದದರು. ಮೆಡಿಕಲ್ ಆಫೀಸರ್ ಡಾ.ವರ್ಧಮಾನ ಮಾತನಾಡಿ, ಮುಖ ಒಂದು ಕಡೆ ವಾಲುವುದು, ಕೈ ಅಥವಾ ಕಾಲಿನಲ್ಲಿ ಬಲ ಕಡಿಮೆಯಾಗುವುದು. ಮಾತನಾಡಲು ತೊಂದರೆಯಾಗುವುದು ಹಾಗೂ ಹಠಾತ್ ತಲೆಸುತ್ತು ಉಂಟಾಗುವುದು ಪಾರ್ಶ್ವವಾಯುವಿನ ಪ್ರಮುಖ ಲಣಗಳಾಗಿರಬಹುದು. ಇಂತಹ ಲಣ ಕಂಡುಬಂದಲ್ಲಿ ವಿಳಂಬ ಮಾಡದೇ ತಣ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ತಿಳಿಸಿದರು.
ಮೆಡಿಸಿನ್ ಎಚ್ಒಡಿ ಡಾ. ವಿಜಯಲಕ್ಷಿ$್ಮ ಮಾತನಾಡಿ, ರಕ್ತದೊತ್ತಡ, ಮಧುಮೇಹ ಹಾಗೂ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಸಮತೋಲಿತ ಆಹಾರ ಸೇವಿಸುವುದರಿಂದ ಸ್ಟ್ರೊಕ್ನ ಅಪಾಯ ಕಡಿಮೆ ಮಾಡಬಹುದು ಎಂದರು.
ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ ಎಂದು ಆಥೋರ್ಪೆಡಿಕ್ ಡಾ.ಮಂಜುನಾಥ ತಿಳಿಸಿದರು. ಫಿಜಿಯೋಥೆರೆಪಿಸ್ಟ್ ಮೋಹನ ರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾರ್ಶ್ವವಾಯುವಿನ ಲಣ, ತಡೆಗಟ್ಟುವ ಕ್ರಮ, ಆರಂಭಿಕ ಗುರುತಿಸುವಿಕೆ ಹಾಗೂ ತುರ್ತು ಚಿಕಿತ್ಸೆಯ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಈ ವೇಳೆ ಎಬಿಆರ್ಕೆ ಜಿಲ್ಲಾ ಸಂಯೋಜಕಿ ಡಾ.ಶ್ವೇತಾ, ಜಿಲ್ಲಾ ಸಂಯೋಜಕಿ ನಾಗರತ್ನ, ಸೈಕಾಲೋಜಿಸ್ಟ್ ಶ್ರೀಲಕ್ಷಿ$್ಮ, ಸಿದ್ಧಾರೂಢ ಇತರರಿದ್ದರು.