

ಶಹಾಪುರ: ಬರದ ಈ ಕಠಿಣ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಶ್ರಮಿಕರು ಹಾಗೂ ಕೂಲಿ ಕಾರ್ಮಿಕರಿಗೆ ಆಸರೆಯಾಗುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಡಿ ಮದ್ದರಕಿ ಗ್ರಾಮದ ಗೋಕಟ್ಟೆ ನಿರ್ಮಾಣ ಕಾಮಗಾರಿ ಸ್ಥಳದಲ್ಲೆ ಭಾನುವಾರ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಜರುಗಿತು.
ಕೂಲಿಕಾರರ ನಡುವೆಯೇ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ವಿಕಸಿತ ಭಾರತ&ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಆಜೀವಿಕ ಮಿಷನ್ ಗ್ರಾಮೀಣ ಯೋಜನೆಯಡಿ ಕೃಷಿ ಕೂಲಿಕಾರರಿಗಾಗಿ ಕೆಲಸ ಪ್ರಾರಂಭಿಸಲಾಗಿದೆ. ಬರದ ಸಂದರ್ಭದಲ್ಲಿ ಯಾರೂ ಉದ್ಯೋಗ ಅರಸಿ ದೂರದ ಪಟ್ಟಣಗಳಿಗೆ ಗುಳೆ ಹೋಗಬಾರದು. ತಮ್ಮ ತಮ್ಮ ಊರಲ್ಲೇ ವಿಬಿ&ಜಿ ರಾಮ್ಜಿ ಯೋಜನೆಯಡಿ ನೀಡಲಾಗುವ ಕೆಲಸಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಗೋಕಟ್ಟೆ ಕಾಮಗಾರಿ ವೀಸಿ ಕಾರ್ಮಿಕರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಕೃಷ್ಣಪ್ಪಗೌಡ ಆಲ್ದಾಳ, ತಾಪಂ ಸಿಒ ಬಸವರಾಜ ಶರಭೈ, ಎಡಿ ಅಕ್ಕನಾಗಮ್ಮ, ಸಹಾಯಕ ಲೆಕ್ಕಾಧಿಕಾರಿ ಶಾರದಮ್ಮ ನಾಗಲೋಟ, ಗ್ರಾಪಂ ಆಡಳಿತಾಧಿಕಾರಿ ಚನ್ನಪ್ಪಗೌಡ ಚೌದ್ರಿ, ಪಿಡಿಒ ದೇವರಾಜ ಗೋನಾಲ ಇತರರಿದ್ದರು. ರಾಜ್ಯೋತ್ಸವ ಅಂಗವಾಗಿ ಕಾಮಗಾರಿ ಅಂಗಳದಲ್ಲೆ ಕೆಂಪು ಮತ್ತು ಹಳದಿ ಬಣ್ಣಗಳಿಂದ ಸುಂದರವಾಗಿ ಬಿಡಿಸಿದ್ದ ಕರ್ನಾಟಕ ನೆ ಹಾಗೂ ಕೂಲಿಕಾರ್ಮಿಕರೇ ತಮ್ಮ ಕೈಯಿಂದಲೇ ಬಿಡಿಸಿದ ಅರ ಆಕೃತಿ ನೋಡುಗರ ಗಮನ ಸೆಳೆಯಿತು.