

ಶಹಾಪುರ: ಗ್ರಾಮೀಣ ಜನರಿಗೆ ದಸರಾ ಹಬ್ಬದ ಸಂಪ್ರದಾಯದ ಮೂಲಕ ಉದ್ಯೋಗದ ಮಹತ್ವ ತಿಳಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಅವರು ಚಟ್ನಳ್ಳಿ ಗ್ರಾಮದಲ್ಲಿ ಮನೆ, ಮನೆಗೆ ಭೇಟಿ ನೀಡಿ ದಸರಾ ಹಬ್ಬದ ಬನ್ನಿ ಹಂಚುವ ಮೂಲಕ ವಿಬಿ&ಜಿ ರಾಮ ಜಿ ಯೋಜನೆಯಡಿ ಕೂಲಿ ಕೆಲಸಕ್ಕೆ ಬರುವಂತೆ ಗ್ರಾಮಸ್ಥರಿಗೆ ಆಹ್ವಾನ ನೀಡಿದರು.
ತಾಲೂಕಿನ ಚಟ್ನಳ್ಳಿ ಗ್ರಾಮ ಪಂಚಾಯಿತಿಯಿಂದ ಶುಕ್ರವಾರ ಗ್ರಾಮದಲ್ಲಿ ಸಂಪ್ರದಾಯಬದ್ಧ ಗೌರವ ಸಲ್ಲಿಸಲು ದಸರಾ ಹಬ್ಬದ ಬನ್ನಿ ಹಂಚುವ ಮೂಲಕ ನಿಮ್ಮೂರಲ್ಲೆ ವಿಕಸಿತ ಭಾರತ&ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಆಜೀವಿಕ್ ಮಿಷನ್ ಗ್ರಾಮೀಣ ಯೋಜನೆಯಡಿ ಕೂಲಿಕಾರರಿಗೆ ನಿರಂತರ ಉದ್ಯೋಗ ನೀಡುವ ಕುರಿತು ಹಮ್ಮಿಕೊಂಡ ವಿಶಿಷ್ಟ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ದಸರಾ ಹಬ್ಬದಲ್ಲಿ ಜನರನ್ನು ಆತ್ಮೀಯವಾಗಿ ಭೇಟಿಯಾದ ಅವರು, ಬರ ಪರಿಸ್ಥಿತಿಯಿಂದ ರೈತರ ಕೃಷಿ ಚಟುವಟಿಕೆ ಕಡಿಮೆಯಾಗಿ ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ, ಉದ್ಯೋಗಕ್ಕಾಗಿ ದೂರದ ನಗರಗಳಿಗೆ ವಲಸೆ ಹೊಗಬಾರದು. ಗ್ರಾಮೀಣ ಪ್ರದೇಶದ ಜನರಿಗೆ ವಿಬಿ&ಜಿ ರಾಮಜಿ ಯೋಜನೆಯಡಿ ದೊರೆಯುವ ಕೂಲಿ ಕೆಲಸದ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಅರ್ಹ ಗ್ರಾಮೀಣ ಕುಟುಂಬಗಳು ವಿಬಿ&ಜಿ ರಾಮ ಜಿ ಯೋಜನೆಯ ಲಾಭ ಪಡೆದು ಉದ್ಯೋಗಕ್ಕಾಗಿ ಮುಂದೆ ಬರಬೇಕು ಎಂದು ಮನವಿ ಮಾಡಿದರು. ಸಾಮಾನ್ಯವಾಗಿ ಸರ್ಕಾರಿ ಯೋಜನೆಗಳ ಕುರಿತು ಸಭೆ, ಸಮಾರಂಭ ಹಾಗೂ ಕರಪತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ವಾಡಿಕೆ. ಆದರೆ, ದಸರಾ ಹಬ್ಬದ ಸಂಪ್ರದಾಯವನ್ನೇ ಜನಜಾಗೃತಿಯ ಮಾಧ್ಯಮವನ್ನಾಗಿ ಬಳಸಿಕೊಂಡು ಮನೆ ಮನೆಗೆ ತೆರಳಿ ಜನರನ್ನು ನೇರವಾಗಿ ಸಂಪರ್ಕಿಸಿದ ಈ ಪ್ರಯತ್ನ ಗ್ರಾಮಸ್ಥರಲ್ಲಿ ಯೋಜನೆಯ ಸದುಪಯೋಗದಲ್ಲಿ ಬದಲಾವಣೆ ತರಲಿದೆ ಎಂದರು.
ಹಬ್ಬದ ಸಂಭ್ರಮದೊಂದಿಗೆ ಸರ್ಕಾರದ ಮಹತ್ವಾಕಾಂ ವಿಬಿ&ಜಿ ರಾಮಜಿ ಯೋಜನೆಯಡಿ ನೋಂದಾಯಿತ ಕುಟುಂಬಗಳಿಗೆ ಪ್ರತಿ ವರ್ಷ 125 ಮಾನವ ದಿನಗಳ ಉದ್ಯೋಗದ ಹಕ್ಕು ಪಡೆದುಕೊಳ್ಳುವ ಸಂದೇಶವನ್ನು ಮನೆ ಮನೆಗೆ ತಲುಪಿಸಿದ ಶರಭೈ ಅವರ ಈ ಪ್ರಯತ್ನ ಸಾರ್ವಜನಿಕ ವಲಯದಲ್ಲಿ ವಿಶೇಷ ಗಮನ ಸೆಳೆಯಿತು.
ಈ ವೇಳೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಅಕ್ಕನಾಗಮ್ಮ, ಚಟ್ನಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷಿ$್ಮ ಪಾಟೀಲ್, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕ ಶಿವುಕುಮಾರ, ವಿಬಿ&ಜಿರಾಮ್ ಜಿ ಯೋಜನೆಯ ಮಾಹಿತಿ, ಶಿಣ, ಸಂವಹನ ಸಂಯೋಜಕ ಬಸಪ್ಪ, ತಾಂತ್ರಿಕ ಸಹಾಯಕ ಆಶಿಫ್, ಗ್ರಾಮ ಕಾಯಕ ಮಿತ್ರ, ಸಂಜೀವಿನಿ ಮಹಿಳಾ ಸ್ವಸಹಾಯ ಸಂದ ಸದಸ್ಯರು, ತಾಲೂಕು ಎನ್ಆರ್ಎಲ್ಎಂ ತಂಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಹುಚ್ಚಪ್ಪ ನಾಯಕ, ರಾಜು ಹಾಗೂ ಸಿಬ್ಬಂದಿ ಇದ್ದರು.